ಪೆಟ್ರೋಲ್, ಡೀಸೆಲ್ ಬಳಿಕ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆಯನ್ನೂ ಇಳಿಕೆ ಮಾಡಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 135 ರೂಪಾಯಿ ಕಡಿತಗೊಂಡಿದೆ.
ಈ ಬೆಲೆ ಕಡಿತದ ಬಳಿಕವೂ ಬೆಂಗಳೂರಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 2 ಸಾವಿರ ರೂಪಾಯಿಗಿಂತ ಅಧಿಕ ಇದೆ.
ಆದರೆ ಮನೆ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಆಗಿಲ್ಲ. ಬೆಂಗಳೂರಲ್ಲಿ ಮನೆ ಬಳಕೆ ಸಿಲಿಂಡರ್ ಬೆಲೆ 1 ಸಾವಿರ ರೂಪಾಯಿಗಿಂತ ಹೆಚ್ಚಿದೆ.