ಮಹಾರಾಷ್ಟ್ರದಲ್ಲಿ ಲಂಪಿ ವೈರಸ್ನಿಂದ (Lumpy Virus) 126 ಜಾನುವಾರುಗಳು ಸಾವನ್ನಪ್ಪಿವೆ. ಮಹಾರಾಷ್ಟ್ರದ ಒಟ್ಟು 25 ಜಿಲ್ಲೆಗಳಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಮಹಾರಾಷ್ಟ್ರದ ಪಶುಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ 47, ಅಹ್ಮದ್ನಗರ ಜಿಲ್ಲೆಯಲ್ಲಿ 21, ಧುಲೆಯಲ್ಲಿ 2, ಅಕೋಲಾದಲ್ಲಿ 18, ಪುಣೆಯಲ್ಲಿ 14, ಲಾತೂರ್ನಲ್ಲಿ 2, ಸತಾರಾದಲ್ಲಿ 6, ಬುಲ್ಧಾನದಲ್ಲಿ 5, ಅಮರಾವತಿಯಲ್ಲಿ 7, ವಾಶಿಮ್ನಲ್ಲಿ 1, ಜಲ್ನಾದಲ್ಲಿ 1 ಮತ್ತು ನಾಗ್ಪುರ ಜಿಲ್ಲೆಯಲ್ಲಿ 1 ಸೇರಿದಂತೆ ಒಟ್ಟು 126 ಸೋಂಕಿತ ಜಾನುವಾರುಗಳು ಸಾವನ್ನಪ್ಪಿವೆ.
ಲಂಪಿ ಸ್ಕಿನ್ ಡಿಸೀಸ್ (ಎಲ್ಎಸ್ಡಿ) ಮಹಾರಾಷ್ಟ್ರ ರಾಜ್ಯದಾದ್ಯಂತ ವೇಗವಾಗಿ ಹರಡುತ್ತಿದೆ. ಇದು ದನಗಳ ಚರ್ಮದ ವೈರಲ್ ಕಾಯಿಲೆಯಾಗಿದೆ. ಈ ರೋಗವು ಪ್ರಾಣಿಗಳಿಂದ ಅಥವಾ ಹಸುವಿನ ಹಾಲಿನಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಪಶುಸಂಗೋಪನಾ ಇಲಾಖೆ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಝೂನೋಟಿಕ್ ಲ್ಯಾಂಗ್ಯಾ ವೈರಸ್ ಅಲರ್ಟ್ !ಈ ವೈರಸ್ ಬಗ್ಗೆ ಎಚ್ಚರಿಕೆ..!
ಪಶುಸಂಗೋಪನಾ ಇಲಾಖೆ ಪ್ರಕಾರ, ಈ ರೋಗದ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಖರೀದಿಸಲು ಡಿಪಿಸಿ ಮೂಲಕ ಜಿಲ್ಲೆಗೆ 1 ಕೋಟಿ ನಿಧಿ ಲಭ್ಯವಾಗಿದೆ. ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯಾಕ್ಸಿನೇಟರ್ಗಳು ಮತ್ತು ಇಂಟರ್ನ್ಗಳಿಗೆ ಪ್ರತಿ ಲಸಿಕೆಗೆ 3 ರೂ. ಗೌರವಧನವನ್ನು ನೀಡಲು ಸಹ ಅನುಮತಿಸಲಾಗಿದೆ.
ನೊಣಗಳು, ಸೊಳ್ಳೆಗಳಿಂದ ಈ ಲಂಪಿ ವೈರಸ್ (Lumpy Virus) ರೋಗ ಹರಡುವುದರಿಂದ ಕೀಟನಾಶಕಗಳ ಸಿಂಪಡಣೆ ಮಾಡುವಂತೆ ಮಹಾರಾಷ್ಟ್ರದ ಪಶುಸಂಗೋಪನಾ ಇಲಾಖೆಯು ಗ್ರಾಮ ಪಂಚಾಯತ್ಗಳಿಗೆ ಸೂಚಿಸಿದೆ.
ಇದನ್ನೂ ಓದಿ : Tomato flu; ಕೇರಳದಲ್ಲಿ ಟೊಮ್ಯಾಟೋ ಫ್ಲೂ.. ವೈರಸ್ ಲಕ್ಷಣಗಳು ಏನು?