ದಂಪತಿ (Family)ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕ್ರೌರ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ (MadhyaPradesh Highcourt ) ತಿಳಿಸಿದೆ ಮಹಿಳೆಗೆ ವಿಚ್ಛೇದನ ನೀಡುವ ಆದೇಶ ರದ್ದುಗೊಳಿಸಿದೆ.
ಕುಟುಂಬ ಸದಸ್ಯರು, ಸಮುದಾಯ ಮತ್ತು ಸಂಬಂಧಿಕರ ನಡುವಿನ ಹಲವು ಸಭೆಗಳ ನಂತರ ಈ ಮದುವೆ ಏರ್ಪಟ್ಟಿದೆ. ಸಣ್ಣ ಭಿನ್ನಾಭಿಪ್ರಾಯಗಳನ್ನು ಗಂಡ (Husband)ಮತ್ತು ಹೆಂಡತಿಯ (Wife )ನಡುವಿನ ಕ್ರೌರ್ಯ ಎನ್ನಲು ಸಾಧ್ಯವಿಲ್ಲ. ಪತಿ- ಪತ್ನಿಯ ನಡುವೆ ರಾತ್ರೋರಾತ್ರಿ ಬದಲಾವಣೆ ಉಂಟಾಗಬೇಕೆಂದು ಯಾವುದೇ ನಿರೀಕ್ಷೆ ಇರಿಸಿಕೊಳ್ಳಬಾರದು. ವೈವಾಹಿಕ ಜೀವನದಲ್ಲಿ ಪತ್ನಿಯಾಗಿ ಮತ್ತು ಪತಿಯಾಗಿ ಬದಲಾಗಲು ಇಬ್ಬರೂ ಪರಸ್ಪರ ಸಮಯ ನೀಡಬೇಕು ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಪತಿಯನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿದೆ ಎಂದು ತನ್ನ ವಿರುದ್ಧದ ವಿಚ್ಛೇದನ (Divorce) ಅರ್ಜಿಯನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ (Family Court)ತೀರ್ಪನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಗೆ ಮೆಲ್ಮನವಿ ಅರ್ಜಿ ಸಲ್ಲಿಸಿದ್ದರು.
ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ (Matrimonial Website) ಪತ್ನಿ ತನ್ನ ಜನ್ಮ ದಿನ ಮತ್ತು ಶೈಕ್ಷಣಿಕ ಅರ್ಹತೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ಹೆಂಡತಿ ಅಹಂಕಾರಿ, ಆಕೆಯ ಬೆವರಿನ ಕಾಯಿಲೆಯ ಚಿಕಿತ್ಸೆಗೆ ಸಿದ್ಧಳಿರಲಿಲ್ಲ ಎಂಬುದು ಪತಿಯ ದೂರಾಗಿತ್ತು. ಮತ್ತೊದೆಡೆ ಪತ್ನಿ ತನ್ನ ಪತಿಯೊಂದಿಗೆ ಬಾಳುವ ಆಸೆ ವ್ಯಕ್ತಪಡಿಸಿದ್ದರು.
ಆದರೆ ಪತ್ನಿ ತನ್ನ ವಿರುದ್ಧ ಕ್ರೌರ್ಯ ಎಸಗಿದ್ದಾಳೆ ಎಂಬುದನ್ನು ಸಾಬೀತುಪಡಿಸಲು ಪತಿಗೆ ಸಾಧ್ಯವಾಗಿಲ್ಲ ಎಂದ ಹೈ ಕೋರ್ಟ್, ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶ ರದ್ದುಗೊಳಿಸಿತು. ಅಲ್ಲದೆ ವೈವಾಹಿಕ ಹಕ್ಕನ್ನು ಮರುಸ್ಥಾಪಿಸುವ ಕುರಿತಂತೆ ನೀಡಲಾದ ತೀರ್ಪು ಪಾಲಿಸುವವರೆಗೆ ಮಧ್ಯಂತರ ಜೀವನಾಂಶಕ್ಕಾಗಿ ಹೆಂಡತಿಗೆ ತಿಂಗಳಿಗೆ 8,000 ರೂಪಾಯಿ ಪಾವತಿಸುವಂತೆ ಪತಿಗೆ ನಿರ್ದೇಶನ ನೀಡಿತು.