ADVERTISEMENT
ದೇಶದಲ್ಲಿ ಟೊಮೆಟೋ ಬೆಲೆಗಳು ಅಂಬರವನ್ನು ತಾಕುತ್ತಿವೆ. ಆದರೆ, ತಮಿಳುನಾಡಿನಲ್ಲೊಬ್ಬರು ಹೃದಯವಂತ ವ್ಯಾಪಾರಿ ಕೇವಲ 20 ರೂಪಾಯಿಗೆ ಕೆಜಿ ಟೊಮೆಟೋ ಬಿಕರಿ ಮಾಡುತ್ತಿದ್ದಾರೆ.
ಕಡಲೂರಿನ ತರಕಾರಿ ವ್ಯಾಪಾರಿ ರಾಜೇಶ್ ಬಡವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಿಂದ ಕೆಜಿ 60 ರೂಪಾಯಿ ಕೊಟ್ಟು 550 ಕೆಜಿ ಟೊಮೆಟೋಗಳನ್ನು ತಂದು ತನ್ನ ಅಂಗಡಿಯಲ್ಲಿ ಕೆಜಿಗೆ 20 ರೂಪಾಯಿಯಂತೆ ಟೊಮೆಟೋ ಮಾರಾಟ ಮಾಡಿದ್ದಾರೆ.
ಟೊಮೆಟೋ ಖರೀದಿ ಮಾಡಲು ಸಾಧ್ಯವಿಲ್ಲದ ಬಡವರಿಗೆ ಅನುಕೂಲ ಮಾಡಿಕೊಡಲು ವ್ಯಾಪಾರಿ ರಾಜೇಶ್ ಈ ನಿರ್ಧಾರ ತೆಗೆದುಕೊಂಡಿದ್ದರು.
ಹೆಚ್ಚು ಮಂದಿಗೆ ಲಾಭವಾಗಲಿ ಎಂಬ ಉದ್ದೇಶದಿಂದ ಒಬ್ಬರಿಗೆ ಒಂದು ಕೆಜಿ ಟೊಮೆಟೋ ಎಂದು ಮೊದಲೇ ನಿಗದಿ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿಯಾಗಿ ಹೋಯಿತು.
2019ರಲ್ಲಿ ಈರುಳ್ಳಿ ಬೆಲೆ ಹೀಗೆಯೇ ಗಗನಕ್ಕೇರಿದ್ದ ಸಂದರ್ಭದಲ್ಲಿಯೂ ರಾಜೇಶ್ ಇದೇ ರೀತಿ ಮಾಡಿದ್ದರು.
ADVERTISEMENT