ಅಕ್ರಮ ಗೋ ಸಾಗಾಟದ ವಾಹನ ತಡೆದು ನಲ್ಲಿಸಲು ಯತ್ನಿಸಿದ ಎಸ್ಐ ಅವರಿಗೆ ಗೋ ಸಾಗಾಟದ ವಾಹನ ತಾಗಿ ಗಾಯಗೊಂಡ ಘಟನೆ ರವಿವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುದ್ಕೋಳಿ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಪುಂಜಾಲಕಟ್ಟೆ ಠಾಣಾ ಎಸ್ಐ ಸುತೇಶ್ ಅವರು ಗಾಯಗೊಂಡಿದ್ದು, ಈ ವೇಳೆ ಗೋ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಗೋ ಸಾಗಾಟ ಮಾಡುತ್ತಿದ್ದ ಮಿನಿ ಲಾರಿಯಲ್ಲಿ ಮೂರು ದನಗಳನ್ನು ಸಾಗಾಟ ಮಾಡಲಾಗುತ್ತಿತ್ತು ಹಾಗೂ ಅವುಗಳನ್ನು ರಕ್ಷಿಸಲಾಗಿದೆ.
ವಾಮದಪದವು-ಕುದ್ಕೋಳಿ ರಸ್ತೆಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಗಮಿಸಿದ ಮಿನಿಲಾರಿ ತಪಾಸಣೆ ಮಾಡಲು ಎಸ್ ಐ ಸುತೇಶ ಸೂಚಿಸಿದ್ದಾರೆ. ಆದರೆ ಅವರು ವಾಹನ ನಿಲ್ಲಿಸದೇ ಏಕಾಏಕಿ ಅವರ ಮೇಲೆಯೇ ನುಗ್ಗಿಸಿ ಪರಾರಿಯಾಗಲು ಯತ್ನಿಸಿದ ಪರಿಣಾಮ ವಾಹನ ಬಡಿದು ಎಸ್ ಐ ಅವರ ಕೈಗೆ ಗಾಯವಾಗಿದೆ. ಬಳಿಕ ಪೊಲೀಸರು ಬೆನ್ನತ್ತಿದಾಗ ಕಳ್ಳರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ವಾಹನ ವಶಪಡಿಸಿಕೊಳ್ಳಲಾಗಿದೆ.
https://youtu.be/bNMdj79VOCk