ಮಂಗಳೂರಿನ ನಗುರಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋ ರೂಮ್ನಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ಶುಕ್ರವಾರ ನಡೆದ ಈ ಘಟನೆಯಲ್ಲಿ ಎಲೆಕ್ಟ್ರಿಕ್ ವಾಹನದ ಶೋ ರೂಮ್ ಬೆಂಕಿಗೆ ಅಹುತಿಯಾಗಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದ ಒಕಿನೋವಾ ಶೋರೂಮ್ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗಿದೆ. ಬೃಹತ್ ಪ್ರಮಾಣದ ಆಸ್ತಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಹಲವಾರು ಒಕಿನೋವಾ ಎಲೆಕ್ಟ್ರಿಕ್ ಬೈಕ್ಗಳು ಬೆಂಕಿಗೆ ಅಹುತಿಯಾದ ಬಗ್ಗೆ ವರದಿಗಳಾಗಿವೆ.