ಕನಸುಗಾರ ಕ್ರೇಜಿ ಸ್ಟಾರ್’ ರವಿಚಂದ್ರನ್ ಮನೆಗೆ ಮಹಾಲಕ್ಷ್ಮಿ ಬರಲಿದ್ದಾರೆ. ಈ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಪುತ್ರ ಸ್ಯಾಂಡಲ್ ವುಡ್ ನಟ ಮನೋರಂಜನ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಮೂಲಗಳ ಪ್ರಕಾರ ಆಗಸ್ಟ್ 21 ಹಾಗೂ 22ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಜೊತೆ ಮನೋರಂಜನ್ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಇನ್ನೂ ಕ್ರೇಜಿ ಸ್ಟಾರ್ ಪುತ್ರ ನಟನಾಗಿ ಸಕ್ರಿಯವಾಗಿದರೆ.
ಮನೋರಂಜನ್ ರವಿಚಂದ್ರನ್ 2017ರಲ್ಲಿ ‘ಸಾಹೇಬ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಆದಾದ ಬಳಿಕ ‘ಬೃಹಸ್ಪತಿ’ ಚಿತ್ರದಲ್ಲಿ ನಟಿಸಿದ್ದರು. 2021ರಲ್ಲಿ ‘ಮುಗಿಲು ಪೇಟೆ’ ಸಿನಿಮಾ ಬಿಡುಗಡೆಯಾಗಿತ್ತು. ಇದೆ ವರ್ಷ ‘ಪ್ರಾರಂಭ’ ಚಿತ್ರ ಬಿಡುಗಡೆ ಆಯಿತು. ಕನ್ನಡ ಚಿತ್ರರಂಗದಲ್ಲಿ ಒಂದು ಬಿಗ್ ಸಕ್ಸಸ್ ಗಾಗಿ ಹೋರಾಡುತ್ತಿದ್ದಾರೆ.
ಇನ್ನೂ ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಅವರು ಸಹ ಚಿತ್ರರಂಗಕ್ಕೆ ಈಗತಾನೇ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ತ್ರಿವಿಕ್ರಮ’ ಇತ್ತೀಚೆಗೆ ತೆರೆಕಂಡಿತು.
2019ರಲ್ಲಿ ರವಿಚಂದ್ರನ್ ಅವರ ಮಗಳ ಮದುವೆಯನ್ನ ಅವರ ಕನಸಿನಂತೆ ಅದ್ದೂರಿಯಾಗಿ ಮಾಡಿದ್ದರು. ಈಗ ಪುತ್ರ ಮನೋರಂಜನ್ ವಿವಾಹದ ಬಗ್ಗೆ ಸುದ್ದಿ ಕೇಳಿಬಂದಿದೆ. ಈ ಕುರಿತು ಅಧಿಕೃತ ಮಾಹಿತಿ ಕುಟುಂಬದಿಂದ ಅತೀ ಶೀಘ್ರವೆ ಹೊರಬೀಳಲಿ ಎಂದು ನಿರೀಕ್ಷಿಸಲಾಗುತ್ತಿದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ರವಿಚಂದ್ರನ್ ಬ್ಯುಸಿ ಆಗಿದ್ದಾರೆ. ಕಿರುತೆರೆ ಕಾರ್ಯಕ್ರಮಗಳ ಜಡ್ಜ್ ಆಗಿಯೂ ಅವರು ಸಕ್ರಿಯರಾಗಿದ್ದಾರೆ. ಅಲ್ಲದೆ ಹೊಸಬರ ಚಿತ್ರಗಳಿಗೆ ಅವರು ಬೆನ್ನು ತಟ್ಟುತ್ತಿದ್ದಾರೆ. ಇದ್ದೆಲದರ ಮದ್ಯ ಮನೋರಂಜನ್ ಮದುವೆಗೆ ಏನೆಲ್ಲ ಕನಸು ಕಂಡಿದ್ದಾರೆ ಎಂದು ಕಾದು ನೋಡಬೇಕಿದೆ