ನಟ ಡಾಲಿ ಧನಂಜಯ ಹಾಗೂ ರಚಿತಾ ರಾಮ್ ಜೋಡಿ ನಟನೆಯ ಮಾನ್ಸೂನ್(Mansoon Raga) ರಾಗ ಸಿನೆಮಾದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಮಾನ್ಸೂನ್ ರಾಗ(Mansoon Raga) ಸಿನೆಮಾ ಇದೇ ಅಗಸ್ಟ್ 19 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಅದರೆ, ಇದೀಗ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿರುವುದಾಗಿ ಚಿತ್ರತಂಡ ಹೇಳಿದೆ.
ನಟ ಡಾಲಿ ಧನಂಜಯ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಾನ್ಸೂನ್ ರಾಗ. ಸಿನೆಮಾದ ಬಿಡುಗಡೆ ದಿನಾಂಕ ಮುಂದೂಡಿದ್ದೇವೆ. ಹಿಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದಿದ್ದಾರೆ.
#MonsoonRaaga
ಬಿಡುಗಡೆ ದಿನಾಂಕ ಬದಲಾಗಿದೆ, ಸದ್ಯದಲ್ಲೆ ಹೊಸ ದಿನಾಂಕದೊಂದಿಗೆ ನಿಮ್ಮ ಮುಂದೆ 🙏@RachitaRamDQ @YashaShivakumar @AnoopSeelin pic.twitter.com/A2W7eJD21P— Dhananjaya (@Dhananjayaka) August 13, 2022
ಮಾನ್ಸೂನ್ ರಾಗ ಸಿನೆಮಾದ ಟ್ರೈಲರ್ ಹಾಗೂ ಹಾಡುಗಳು ಜನರ ಗಮನ ಸೆಳೆದಿದ್ದವು. ಅದರಲ್ಲೂ ಪ್ರಮುಖವಾಗಿ ನಟ ಡಾಲಿ ಧನಂಜಯ ಹಾಗೂ ನಟಿ ರಚಿತಾ ರಾಮಗ ಅವರ ಜೋಡಿಯ ನಟನೆ ಎಲ್ಲರ ಕಣ್ಮನ ಸೆಳೆದಿತ್ತು
ಈ ಚಿತ್ರವನ್ನು ಪುಷ್ಪಕ ವಿಮಾನ ಖ್ಯಾತಿಯ ರವೀಂದ್ರನಾಥ್ ಅವರು ನಿರ್ದೇಶನ ಮಾಡುತ್ತಿದ್ದು, ವಿಖ್ಯಾತ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಹ ನಟರಾಗಿ ಯಶ ಶಿವಕುಮಾರ್, ಸುಹಾಸಿನಿ ಹಾಗೂ ಅಚ್ಯುತ್ ಕುಮಾರ್ ಬಣ್ಣ ಹಚ್ಚಿದ್ದಾರೆ.