ಷೇರು ಮಾರುಕಟ್ಟೆಯಲ್ಲಿ ಕಂಪನ ಮುಂದುವರೆದಿದೆ. ಇವತ್ತು ಬಿಎಸ್ಇ ಸೂಚ್ಯಂಕ 1,158 ಅಂಕಗಳಷ್ಟು ಕುಸಿದಿದ್ದು, ನಿಫ್ಟಿ 359 ಅಂಕಗಳಷ್ಟು ಕುಸಿದಿದೆ.
ಪೇರು ಮಾರುಕಟ್ಟೆ ಕುಸಿತದಿಂದ ಇವತ್ತೊಂದೇ ದಿನ ಷೇರುದಾರರಿಗೆ 5 ಲಕ್ಷ ಕೋಟಿ ರೂಪಾಯಿ ಮೊತ್ತದ ನಷ್ಟ ಆಗಿದೆ. ಏಪ್ರಿಲ್ 11ರಿಂದ ಮಾರುಕಟ್ಟೆ ಕುಸಿತದಿಂದ 34 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ.
ಅಮೆರಿಕದಲ್ಲಿ ಹಣದುಬ್ಬರ ದರ ಅಂದಾಜಿಗಿAತ ಹೆಚ್ಚಿರುವುದು, ಡಾಲರ್ ಮೌಲ್ಯ ಇನ್ನಷ್ಟು ವರ್ಧಿಸಿರುವುದು, ಏಷ್ಯಾದ ಇತರೆ ಷೇರು ಮಾರುಕಟ್ಟೆಗಳಲ್ಲಿನ ಕುಸಿತ ಭಾರತದ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇವತ್ತೂ 3,609 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.