ಗಂಡನ ಮನೆಯವರು ಓದು ಮುಂದುವರಿಸಲು ಒಪ್ಪಲಿಲ್ಲ ಎಂದು ಬೇಸರಗೊಂಡು 25 ವರ್ಷದ ಮಹಿಳೆಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಳಿಯ ಮುಂಡ್ರುಪಾಡಿಯಲ್ಲಿ ನಡೆದಿದೆ.
25 ವರ್ಷದ ಚೈತ್ರಾ ಆಡಿಗ ಸಾವಿಗೆ ಶರಣಾದವರು.
ಡಿಸೆಂಬರ್ 2018ರಲ್ಲಿ ಇವರಿಗೆ ದೀಪಕ್ ಎಂಬವರ ಜೊತೆಗೆ ಮದ್ವೆ ಆಗಿತ್ತು.
ಉಜಿರೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡಿದ್ದ ಇವರಿಗೆ ಒಂದೂವರೆ ವರ್ಷದ ಮಗುವಿದೆ.
ಇವರು ಕೆಲಸ ಬಿಟ್ಟು ಮನೆಯಲ್ಲಿದ್ದರು.
ಎಂಎ ಸ್ನಾತಕೋತ್ತರ ಪದವಿ ಮುಗಿಸಿದ್ದ ಇವರು ಬಿ ಎಡ್ ಮಾಡಲು ನಿರ್ಧರಿಸಿದ್ದರು. ಆದರೆ ಗಂಡನ ಮನೆಯವರು ಈ ವರ್ಷ ಬೇಡ, ಮುಂದಿನ ವರ್ಷ ಕೋರ್ಸ್ಗೆ ಸೇರುವಂತೆ ಹೇಳಿದ್ದರು ಮತ್ತು ಇದರಿಂದ ಚೈತ್ರಾ ಆಡಿಗ ಬೇಸರಗೊಂಡಿದ್ದರು.
ಚೈತ್ರಾ ಅವರ ತಾಯಿ ತಮ್ಮ ಮಗಳ ಸಾವಿನ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ADVERTISEMENT
ADVERTISEMENT