ದೇಶದ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಷೇರು ಮೌಲ್ಯದಲ್ಲಿ ಭಾರೀ ಏರಿಕೆ ಆಗಿದೆ. ಇವತ್ತು ಮಾರುತಿ ಸುಜುಕಿ ಷೇರುಗಳ ಮೌಲ್ಯ ಎನ್ಎಸ್ಇನಲ್ಲಿ ಶೇಕಡಾ 5.22ರಷ್ಟು ಹೆಚ್ಚಳವಾಗಿದೆ. ಅಂದರೆ ಮಾರುತಿ ಷೇರುಗಳ ಮೌಲ್ಯ 11,793 ರೂಪಾಯಿಗೆ ಹೆಚ್ಚಳವಾಗಿದೆ.
2023ರ ಡಿಸೆಂಬರ್ಗೆ ಹೋಲಿಸಿದ್ರೆ ಕಳೆದ ವರ್ಷದ ಡಿಸೆಂಬರ್ನಲ್ಲಿ ಮಾರುತಿ ಸುಜುಕಿ ವಾಹನಗಳ ದಾಖಲೆ ಮಾರಾಟದಿಂದಾಗಿ ಷೇರುಗಳ ಮೌಲ್ಯ ಕೂಡಾ ಹೆಚ್ಚಳವಾಗಿದೆ.
2023ರ ಡಿಸೆಂಬರ್ನಲ್ಲಿ ಮಾರುತಿ ಸುಜುಕಿ ಕಂಪನಿಯ 1,37,551 ಕಾರುಗಳ ಮಾರಾಟವಾಗಿತ್ತು. ಆದರೆ 2024ರ ಡಿಸೆಂಬರ್ನಲ್ಲಿ 1,78,248 ಕಾರುಗಳ ಮಾರಾಟವಾಗಿದೆ. ಅಂದರೆ ಶೇಕಡಾ 30ರಷ್ಟು ಹೆಚ್ಚಳವಾಗಿದೆ.
ಈ ಮೂಲಕ ಹೊಸ ವರ್ಷದ ಮೊದಲ ಎರಡು ದಿನದಲ್ಲೇ ಮಾರುತಿ ಷೇರುಗಳ ಮಾರಾಟ ಶೇಕಡಾ 7ರಷ್ಟು ಹೆಚ್ಚಳವಾಗಿದೆ.
ಸಣ್ಣ ಕಾರುಗಳಾದ ಆಲ್ಟೋ, ಎಸ್-ಪ್ರೆಸ್ಸೋ 7,418 ಮಾರಾಟವಾಗಿದೆ. ಬಲೆನೋ, ಸೆಲೆರಿಯೋ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನ್ಆರ್ ಕಾರುಗಳು 54,906ರಷ್ಟು ಮಾರಾಟವಾಗಿದೆ. ಬ್ರೀಜಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಇನ್ವಿಕ್ಟೋ ಮತ್ತು ಎಕ್ಸ್ಎಲ್6 ಕಾರುಗಳು 55,651 ಕಾರುಗಳು ಮಾರಾಟವಾಗಿವೆ.
ಸೇಡಾನ್ ಮತ್ತು ಸಿಯಾಜ್ ಕಾರುಗಳು 464ರಷ್ಟು ಮಾರಾಟವಾಗಿವೆ.
ಮಾರುತಿ ಸುಜಿಕಿ ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ ಡಿಸೆಂಬರ್ನಲ್ಲಿ 37,419 ಕಾರುಗಳನ್ನು ರಫ್ತು ಮಾಡಲಾಗಿದೆ.
ADVERTISEMENT
ADVERTISEMENT