ಕೆಲವು ಮ್ಯಾಟ್ರಿಮೋನಿಯಲ್ ಜಾಹೀರಾತುಗಳು (Matrimonial Advt)ಈ ಮಧ್ಯೆ ಪಾಪುಲರ್ ಆಗುತ್ತಿವೆ. ಇಂತಿಂತಹ ಅರ್ಹತೆ, ಇಂತಿಂತಹ ಗುಣ ಇರುವವರು ಮಾತ್ರ ಸಂಪರ್ಕಿಸಬಹುದು ಎಂದು ಪ್ರಕಟವಾಗುವ ಜಾಹೀರಾತುಗಳು ವೈರಲ್ ಆಗುತ್ತಿವೆ. ಇದೀಗ ವರ ಬೇಕು ಎಂದು ಯುವತಿ ಕಡೆಯವರು ಮಾಡಿದ ಪ್ರಕಟಣೆಯೊಂದು ಎಲ್ಲರನ್ನು ಅಚ್ಚರಿಯಲ್ಲಿ ಕೆಡವಿದೆ. ಜಾಹೀರಾತಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ವರ ನಮಗೆ ಬೇಡ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿರೋದು ಗಮನಾರ್ಹ.
ಧನಿಕ ವ್ಯಾಪಾರಿ ಕುಟುಂಬದ ಎಂಬಿಎ (MBA) ಪೂರ್ತಿ ಮಾಡಿದ ವಧುವಿಗೆ ಐಎಎಸ್, ಐಪಿಎಸ್, ವೈದ್ಯ, ಉದ್ಯಮಿ, ವ್ಯಾಪಾರಿಯಾದ ವರ ಬೇಕಾಗಿದೆ. ಆದರೆ, ಸಾಫ್ಟ್ವೇರ್ ಎಂಜಿನಿಯರ್ಗಳು ಕರೆ ಮಾಡಬೇಡಿ ಎಂದು ಜಾಹೀರಾತಿನಲ್ಲಿ ಸ್ಪಷ್ಟವಾಗಿ ಹೇಳಿದೆ.
ಈ ಜಾಹೀರಾತಿನ ಕ್ಲಿಪ್ಪಿಂಗ್ ಅನ್ನು ಉದ್ಯಮಿ ಸಮೀರ್ ಆರೋರಾ (Businessmen Sameer Arora) ಟ್ವಿಟ್ಟರ್ನಲ್ಲಿ ( Twitter ) ಶೇರ್ ಮಾಡಿದ್ದಾರೆ. ಐಟಿಯಲ್ಲಿ ಭವಿಷ್ಯ ಸರಿಯಾಗಿ ಕಾಣುತ್ತಿಲ್ಲ ಎಂಬ ವ್ಯಾಖ್ಯಾನಿಸಿದ್ದಾರೆ.
ಇದಕ್ಕೆ ನೆಟ್ಟಿಗರೊಬ್ಬರು ದೇಶದ ಭವಿಷ್ಯವೇ ಸರಿ ಇಲ್ಲವಲ್ಲ ಎಂದು ಟ್ವೀಟಿಸಿದ್ದಾರೆ. ಐಟಿ ಇಲ್ಲ ಅಂದರೇ ದೇಶದ ಪ್ರಜೆಗಳ ಭವಿಷ್ಯ ಕೂಡ ಸರಿ ಇರಲ್ಲ ಎಂದು ಇನ್ನೊಬ್ಬರು ಟ್ವೀಟಿಸಿದ್ದಾರೆ. ನಾವು ಅಷ್ಟು ಕೆಟ್ಟವರಾ ಎಂದು ಟೆಕ್ಕಿಯೊಬ್ಬರು ಪ್ರಶ್ನಿಸಿದ್ದಾರೆ. ದೇವರೇ ಧನ್ಯವಾದ ನಂಗೆ ೧೧ ವರ್ಷಗಳ ಹಿಂದೆಯೇ ಮದುವೆ ಆಗಿದೆ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.