ಈ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲವನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯೂ ದರ್ಶನ್ ಪುಟ್ಟಣ್ಣಯ್ಯ ಅವರು ಸ್ಪರ್ಧೆ ಮಾಡುತ್ತಿದ್ದಾರೆ.
ಈ ಬಾರಿ ದರ್ಶನ್ ಪುಟ್ಟಣಯ್ಯ ಮತ್ತು ಹಾಲಿ ಶಾಸಕ ಸಿ ಎಸ್ ಪುಟ್ಟರಾಜು ಅವರ ನಡುವೆ ನೇರ ಹಣಾಹಣಿ ಇದೆ.
2013ರಲ್ಲೂ ಕೆ ಎಸ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಪರೋಕ್ಷವಾಗಿ ಮೇಲುಕೋಟೆಯಲ್ಲಿ ಬೆಂಬಲಿಸಿತ್ತು. ಆಗ ಪುಟ್ಟಣಯ್ಯ ಅವರು ಗೆದ್ದು ಶಾಸಕರೂ ಆದರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಸದಸ್ಯರಾಗಿದ್ದ ಎಲ್ಡಿ ರವಿ ಠೇವಣಿ ಕಳೆದುಕೊಂಡು ಸೋಲಬೇಕಾಯಿತು.
2018ರ ಚುನಾವಣೆಯಲ್ಲಿ ದರ್ಶನ್ ಅವರು ಸ್ವರಾಜ್ ಇಂಡಿಯಾದಿಂದ ಸ್ಪರ್ಧಿಸಿ 77 ಸಾವಿರ ಮತಗಳನ್ನು ಪಡೆದಿದ್ದರು.
ಮೇಲುಕೋಟೆಯಲ್ಲಿ ಹಾಲಿ ಶಾಸಕ ಪುಟ್ಟರಾಜು ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ ದರ್ಶನ್ ಅವರಿಗೆ ಈ ಬಾರಿಯೂ ಕಾಂಗ್ರೆಸ್ ಬೆಂಬಲಿಸಿದರೆ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಬಹುದು ಎಂಬುದು ಲೆಕ್ಕಾಚಾರ.
ADVERTISEMENT
ADVERTISEMENT