ADVERTISEMENT
ಎರಡು ದಿನ ತುಮಕೂರು ಮತ್ತು ಚಾಮರಾಜನಗರಕ್ಕೆ ಮೆಮೂ ರೈಲುಗಳ ಓಡಾಟ ರದ್ದಾಗಿದೆ. ಜೂನ್ 14 ಮತ್ತು 15ರಂದು ಮೆಮೂ ರೈಲುಗಳ ಓಡಾಟ ರದ್ದಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ತುಮಕೂರು-ಕೆಸಿಆರ್ ಬೆಂಗಳೂರು ನಡುವಿನ ಮೆಮೂ ರೈಲು (06576) ಮತ್ತು ಕೆಸಿಆರ್ ಬೆಂಗಳೂರು-ತುಮಕೂರು ನಡುವೆ ಸಂಚರಿಸುವ 06575 ಮೆಮೂ ರೈಲಿನ ಓಡಾಟವನ್ನು ಎರಡು ದಿನ ರದ್ದುಗೊಳಿಸಲಾಗಿದೆ.
ಯಶವಂತಪುರದಿಂದ ಚಾಮರಾಜನಗರಕ್ಕೆ ತೆರಳುವ 16240 ಸಂಖ್ಯೆ ಮೆಮೂ ರೈಲು ಮತ್ತು ಚಾಮರಾಜನಗರದಿಂದ ಯಶವಂತಪುರಕ್ಕೆ ತೆರಳುವ 16240 ಸಂಖ್ಯೆಯ ಮೆಮೂ ರೈಲುಗಳ ಓಡಾಟ ರದ್ದಾಗಿದೆ.
ಯಶವಂತಪುರದಲ್ಲಿ ಕೇಬಲಿಂಗ್ ಕಾಮಗಾರಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನ ಮೆಮೂ ರೈಲುಗಳ ಓಡಾಟ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ADVERTISEMENT