ಮೆಟ್ರೋ ಬಳಕೆ (Metro Users) ಮಾಡುವ ಬೆಂಗಳೂರಿಗರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಟೋಕನ್ಗಾಗಿ ಸರದಿ ಸಾಲಿನಲ್ಲಿ ನಿಲ್ಲದೇ, ಮೆಟ್ರೋ ಟಿಕೆಟ್ ಪಡೆಯಬಹುದಾಗಿದೆ.
ನಮ್ಮ ಮೆಟ್ರೋ ಕಾರ್ಪೋರೇಷನ್ ಇದೇ ಅಕ್ಟೋಬರ್ನಿಂದ ಸ್ಮಾರ್ಟ್ ಕಾರ್ಡ್ ಅಥವಾ ಟೋಕನ್ ಇಲ್ಲದೆ ಪ್ರಯಾಣಿಕರು ಪ್ರಯಾಣಿಸಲು ಅನುಕೂಲ ಮಾಡಿಕೊಡುತ್ತಿದೆ.
ನಮ್ಮ ಮೆಟ್ರೋ QR ಕೋಡ್ ಆಧಾರಿತ ಟಿಕೆಟ್ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಈ ಟಿಕೆಟ್ಗಳನ್ನು ಮೊಬೈಲ್ನಲ್ಲಿಯೇ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಷನ್ ಮೂಲಕ ಮೆಟ್ರೋ ಬಳಕೆ (Metro Users) ಮಾಡುವವರು ಸುಲಭವಾಗಿ ಖರೀದಿಸಬಹುದಾಗಿದೆ. ಇದನ್ನೂ ಓದಿ : ಬೆಂಗಳೂರು : ದೇಶದಲ್ಲೇ ಮೊದಲು ಎಂಜಿ ರಸ್ತೆಯ ‘ಮೆಟ್ರೋ’ ನಿಲ್ದಾಣದಲ್ಲಿ 5G ಪರೀಕ್ಷೆ
ಅಪ್ಲಿಕೇಷನ್ನಲ್ಲಿ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ, ಎಷ್ಟು ಜನ ಹೋಗಬೇಕು ಎಂದು ನಮೂದಿಸಿದರೆ ಸಾಕು ಹಣ ಪಾವತಿ ಮಾಡಿ ಟಿಕೆಟ್ ಖರೀದಿಸಬಹುದಾಗಿದೆ. ಇದು ಪ್ರಯಾಣಿಕರಿಗೆ ಸಮಯವನ್ನು ಉಳಿಸಲು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ದೀರ್ಘ ಸರದಿ ಸಾಲುಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ನಮ್ಮ ಮೆಟ್ರೋ ಅಪ್ಲಿಕೇಶನ್ QR ಕೋಡ್ ಅನ್ನು ಪ್ರದರ್ಶಿಸುತ್ತದೆ. ಅದನ್ನು ಮೆಟ್ರೋ ನಿಲ್ದಾಣಗಳಲ್ಲಿ QR-ಸಕ್ರಿಯಗೊಳಿಸಿದ ಸ್ವಯಂಚಾಲಿತ ಶುಲ್ಕ ಸಂಗ್ರಹಣೆ (AFC) ಗೇಟ್ಗಳಲ್ಲಿ ಟ್ಯಾಪ್ ಮಾಡಿ ಪ್ರಯಾಣಿಸಬಹುದಾಗಿದೆ. ಇದನ್ನೂ ಓದಿ : ಬೆಂಗಳೂರಿಗೆ ಬಂದಾಗೆಲ್ಲ ಪುನೀತ್ ಅಣ್ಣನ್ನ ಮೀಟ್ ಮಾಡ್ತಿದ್ದೆ – ವಿಜಯ್ ದೇವರಕೊಂಡ