ಮೈಕ್ರೋಸಾಫ್ಟ್ ಕಂಪೆನಿ ವೆಬ್ ಬ್ರೌಸರ್ ಆದ ಇಂಟರ್ನೆಟ್ ಎಕ್ಸ್ಪ್ಲೋರರ್(Internet Explorer) ಗೆ 27 ವರ್ಷಗಳ ನಂತರ ನಿವೃತ್ತಿ ಘೋಷಣೆ ಮಾಡಿದೆ.
ಕಳೆದ ವರ್ಷವಷ್ಟೇ ಇಂಟರ್ನೆಟ್ ಎಕ್ಸ್ಪ್ಲೋರರ್ 11 ಆವೃತ್ತಿಯನ್ನು ಮೈಕ್ರೋಸಾಪ್ಟ್ ಕಂಪೆನಿ ಬಿಡುಗಡೆ ಮಾಡಿತ್ತು.
ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಕಂಪ್ಯೂಟರ್ಗಳಲ್ಲಿ ಅಂತರ್ಜಾಲ ಬಳಕೆಗಾಗಿ 1995 ಮತ್ತು 2004 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಸಮಯದಲ್ಲಿ ಇದು ಮಾರುಕಟ್ಟೆಯಲ್ಲಿ ಶೇ 95 ರಷ್ಟು ಪ್ರಾಬಲ್ಯ ಸಾಧಿಸಿತ್ತು.
ಆದರೆ, ಇದೀಗ ಗೂಗಲ್ ಕ್ರೋಮ್(Google Chrome), ಆ್ಯಪಲ್ನ ಸಫಾರಿ ( Apple’s Safari )ಮತ್ತು ಮೋಜಿಲ್ಲಾ ಫೈರ್ ಫಾಕ್ಸ್ (Mozilla Firefox)ಗಳು ಪೂರ್ಣ ಪ್ರಮಾಣ ಪ್ರಾಬಲ್ಯ ಸಾಧಿಸಿವೆ.
ಮೈಕ್ರೋಸಾಫ್ಟ್ ಬಳಸುವ ಬಳಕೆದಾರರಿಗಾಗಿ 2015 ರಲ್ಲಿ ವಿಂಡೋಸ್ನ 10 ರ ಮೈಕ್ರೋಸಾಫ್ಟ್ ಎಡ್ಜ್ (Microsoft Edge) ಬಳಸುವಂತೆ ನಿರ್ದೇಶನ ನೀಡಿತ್ತು.
ವೇಗದ ಹುಡುಕಾಟ ಸಾಮರ್ಥ್ಯ ಹೊಂದಿರುವ ಅಂತರ್ಜಾಲ ತಾಣಗಳಾದ ಕ್ರೋಮ್, ಫೈರ್ ಫಾಕ್ಸ್ (Firefox) ಸರ್ಚ್ ಇಂಜಿನ್ಗಳಿಂದ ಇಂಟರ್ನೆಟ್ ಎಕ್ಸ್ಪ್ಲೋರರ್ (Internet Explorer)ಗೆ ದೊಡ್ಡ ಹೊಡೆತ ಬಿದ್ದಿತು. ಅಲ್ಲದೇ, ಇನ್ನಷ್ಟು ವಿಶೇಷತೆಗಳೊಂದಿಗೆ ಬಂದ ಗೂಗಲ್ ಸರ್ಚ್, ಯೂಟ್ಯೂಬ್ ಹಾಗೂ ಫೇಸ್ಬುಕ್ಗಳು ಬಳಕೆದಾರರಿಗೆ ಇನ್ನಷ್ಟು ಹತ್ತಿರವಾದವು.
ನೂತನ ಸ್ಮಾರ್ಟ್ಫೋನ್ಗಳೊಂದಿಗೆ ಸಫಾರಿ, ಕ್ರೋಮ್ ನಂತಹ ಸರ್ಚ್ ಇಂಜಿನ್ಗಳಿನ್ನು ಮೊದಲೇ ಇನ್ಸ್ಟಾಲ್ ಮಾಡಲಾಗುತ್ತಿತ್ತು. ಇದು ಇಂಟರ್ನೆಟ್ ಎಕ್ಸ್ಪ್ಲೋರರ್(Internet Explorer) ನಿಂದ ಬಳಕೆದಾರರು ಬದಲಾಗಲು ಪ್ರಮುಖ ಕಾರಣವಾಯಿತು.
ಕಳೆದ ವರ್ಷ ಸ್ಟಾಟ್ಕೌಂಟರ್ ಕಂಪೆನಿಯ ವರದಿಗಳ ಪ್ರಕಾರ, ಶೇ.60 ಕ್ಕಿಂತಲೂ ಹೆಚ್ಚು ಕಂಪ್ಯೂಟರ್ಗಳಲ್ಲಿ ಗೂಗಲ್ ಕ್ರೋಮ್ ಬಳಕೆಯಲ್ಲಿದೆ. ಅಲ್ಲದೇ, ಇದೇ ಮೊದಲ ಸಲ ಫೈರ್ಪಾಕ್ಸ್ ಬಳಕೆದಾರರಿಗಿಂತ ಇಂಟರ್ನೆಟ್ ಎಕ್ಸ್ಪ್ಲೋರರ್ ಮತ್ತು ಮೈಕ್ರೋಸಾಪ್ಟ್ ಎಡ್ಜ್ ಬಳಕೆದಾರರ ಪ್ರಮಾಣ ಗಣನೀಯ ಇಳಿಕೆ ಕಂಡಿದೆ.