ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿರುವ ಡಿ ಸುಧಾಕರ್ ಅವರನ್ನು ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ವತಿಯಿಂದ ಸನ್ಮಾನಿಸಲಾಯಿತು.
ಬೆಂಗಳೂರಿನ ಗಾಂಧಿನಗರದಲ್ಲಿರುವ ಡಿ ಸುಧಾಕರ್ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಜೈನಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಖನ್ನಾ ಮತ್ತು ಕಾರ್ಯದರ್ಶಿ ರೋಜ್ಕುಮಾರ್ ಇವರು ಸಚಿವ ಸುಧಾಕರ್ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.
ಡಿ ಸುಧಾಕರ್ ಅವರು ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿರುವ ಜೈನ ಸಮುದಾಯಕ್ಕೆ ಸೇರಿದ ಏಕೈಕ ಸಚಿವ. ಇವರು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದಾರೆ. ಇವರು ಹಿರಿಯೂರು ಕ್ಷೇತ್ರದ ಶಾಸಕರು.
ADVERTISEMENT
ADVERTISEMENT