ADVERTISEMENT
ಸಾಗರ (Sagara, Shivamogga) ಸರ್ಕಾರಿ ಆಸ್ಪತ್ರೆಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ (Dr K C Narayanagowda) ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಯಾಲಿಸಿಸ್ ಸೆಂಟರ್ ಗೆ (Dialysis Center) ಹೆಚ್ಚಿನ ಉಪಕರಣಗಳು ಅವಶ್ಯಕತೆಯಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಯನ್ನು ಉನ್ನತ್ತಿಕರಿಸಲು ಶಾಸಕ ಹರತಾಳು ಹಾಲಪ್ಪ (Haratalu Halappa) ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ನಾರಾಯಣಗೌಡ ಅವರು, ಆಸ್ಪತ್ರೆಗೆ ಅಗತ್ಯವಿರುವ ಡಯಾಲಿಸಿಸ್ ಉಪಕರಣಗಳನ್ನು ಒದಗಿಸಲು ಕೂಡಲೇ ಕ್ರಮವಹಿಸಲಾಗುವುದು. ಆಸ್ಪತ್ರೆಯ ಒತ್ತಡಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳಾಗಬೇಕಿದ್ದು, ಕೂಡಲೇ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ನೆರವು ನೀಡಲು ಸಹಕರಿಸುವುದಾಗಿ ಎಂದು ತಿಳಿಸಿದರು.
ADVERTISEMENT