ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕಾಮಗಾರಿಗಳ ಅನುದಾನ ಬಿಡುಗಡೆಗೆ ಲಂಚ ಕೇಳಿದ ಗಂಭೀರ ಆರೋಪ ಕೇಳಿಬಂದಿದೆ. ಖುದ್ದು ಗುತ್ತಿಗೆದಾರರೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ ಎಂದು ಇಂಗ್ಲೀಷ್ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರತಿಕ್ಷಣನ್ಯೂಸ್ ವೆಬ್ಸೈಟ್ ಗುತ್ತಿಗೆದಾರರ ಸಂತೋಷ್ ಅವರ ಜೊತೆಗೆ ಮಾತಾಡಿದ್ದು, ಅವರು ತಾವು ಪತ್ರ ಬರೆದಿರುವುದಾಗಿಯೂ ತಮ್ಮ ಆರೋಪ ನಿಜ ಎಂದು ಪ್ರತಿಕ್ರಿಯಿಸಿದ್ದಾರೆ.
ಹಿಂದೂ ವಾಹಿನಿ ಸಂಘಟನೆಯ ರಾಷ್ಟಿçÃಯ ಕಾರ್ಯದರ್ಶಿಯೂ ಆಗಿರುವ ಬೆಳಗಾವಿ ಜಿಲ್ಲೆಯ ಸಿವಿಲ್ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಅವರು ಇದೇ ತಿಂಗಳ 11ರಂದು ಮೋದಿ ಮತ್ತು ಗಿರಿರಾಜ್ ಸಿಂಗ್ ಅವರಿಗೆ ಸಚಿವ ಈಶ್ವರಪ್ಪ ವಿರುದ್ಧ ಪತ್ರ ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಹಿಡಾಲ್ಗೋ ಗ್ರಾಮದಲ್ಲಿ ಕೈಗೊಂಡಿರುವ ಕಾಮಗಾರಿ ಮತ್ತು ಅದರ ಅನುದಾನ ಬಿಡುಗಡೆ ಸಂಬAಧ ಪ್ರಮುಖವಾಗಿ ಪತ್ರದಲ್ಲಿ ದೂರಿದ್ದಾರೆ.
`2021ರ ಮಾರ್ಚ್ 12ರೊಳಗೆ ರಸ್ತೆ ಕಾಮಗಾರಿಗಳನ್ನು ಮುಗಿಸುವಂತೆ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದರು ಮತ್ತು ಅದರಲ್ಲಿ 4 ಕೋಟಿ ರೂಪಾಯಿ ಮೊತ್ತದ 108 ಕಾಮಗಾರಿಗಳನ್ನು ಮುಗಿಸಿದ್ದೇವೆ. ಕಾಮಗಾರಿ ಮುಗಿದು ಒಂದು ವರ್ಷವಾದರೂ ನಮಗೆ ಇನ್ನೂ ವರ್ಕ್ ಆರ್ಡರ್ ಸಿಕ್ಕಿಲ್ಲ ಮತ್ತು ಸಂಬAಧಪಟ್ಟ ಇಲಾಖೆಯಿಂದ ಬಿಡಿಗಾಸೂ ಬಿಡುಗಡೆ ಆಗಿಲ್ಲ.
ಮಂತ್ರಿಗಳ ಆಪ್ತರು ಕಮಿಷನ್ ಕೊಡುವಂತೆ ನನಗೆ ಬೆದರಿಸುತ್ತಿದ್ದಾರೆ. ನಾನು ಆತಂಕಕ್ಕೊಳಗಾಗಿದ್ದು, ಸಾಲ ಕೊಟ್ಟವರಿಂದ ನನ್ನ ಮೇಲೆ ತೀವ್ರ ಒತ್ತಡ ಇದೆ. ಒಂದು ವೇಳೆ ತಕ್ಷಣವೇ ನನಗೆ ಅನುದಾನ ಬಿಡುಗಡೆ ಆಗದ್ದೇ ಇದ್ದಲ್ಲಿ ನನಗೆ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಇಲ್ಲ’ ಎಂದು ಪತ್ರದಲ್ಲಿ ಗುತ್ತಿಗೆದಾರರ ಸಂತೋಷ್ ಕೆ ಪಾಟೀಲ್ ಅವರು ಪತ್ರದಲ್ಲಿ ದೂರಿದ್ದಾರೆ.
ಸಚಿವ ಈಶ್ವರಪ್ಪ ಆಪ್ತರು ಕಮಿಷನ್ ಕೇಳುತ್ತಿದ್ದಾರೆ – ಪ್ರಧಾನಿ ಮೋದಿ, ಕೇಂದ್ರ ಸಚಿವರಿಗೆ ಗುತ್ತಿಗೆದಾರರಿಂದ ಸ್ಫೋಟಕ ಪತ್ರ