`ಜನಗಳಿಗೆ ಬಿಜೆಪಿ ಟೋಪಿ ಹಾಕ್ಲಿಕ್ಕೆ ಇರೋದು. ಜನಗಳಿಗೋಸ್ಕರನೇ ಈ ಬಿಜೆಪಿ ಟೋಪಿ. ನಮಗೂ ಅವರು ಹಾಕ್ತಾ ಇದ್ದಾರೆ, ನಾವೂ ಅವರಿಗೆ ಹಾಕ್ತಾ ಇದ್ದೀವಿ’ – ಇದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಆಡಿರುವ ಮಾತು.
ಏಪ್ರಿಲ್ 9ರಂದು ಸಚಿವ ಈಶ್ವರಪ್ಪ ಮತ್ತು ಬಿಜೆಪಿ ಎಂಎಲ್ಸಿ ರವಿಕುಮಾರ್ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ
`ಏನ್ ಈಗ ಟೋಪಿ ಕಡ್ಡಾಯನಾ..?’ ಎಂದು ಎಂಎಲ್ಸಿ ರವಿಕುಮಾರ್ ಸಚಿವ ಈಶ್ವರಪ್ಪ ಅವರ ಬಳಿ ಕೇಳಿದರು. ಆಗ `ನಿಮಗೂ ಹಾಕ್ತೀವಿ ಟೋಪಿ, ಯಾವಾಗ್ಲೂ ಹಾಕ್ತಾ ಇದ್ದೀವಿ’ ಎಂದು ಸಚಿವ ಈಶ್ವರಪ್ಪ ಮಾಧ್ಯಮದವರಿಗೆ ಹೇಳಿದರು.
`ನಾವು ಹಾಕ್ತಿರುವ ಟೋಪಿಯ ಗುಂಡಿ ಬಿದ್ದಿದ್ರೆ..ಗೊತ್ತಿಲ್ಲ ನಿಮಗೆ.’ ಎಂದು ಈಶ್ವರಪ್ಪ ಹೇಳಿದರು. `ಸರ್ ನಮಗೆ ಹಾಕಿದರೆ ಓಕೆ, ಜನರಿಗೆ ಹಾಕಬಾರದು’ ಎಂಎಲ್ಸಿ ರವಿಕುಮಾರ್ ಹೇಳಿದರು.
`ಜನರಿಗೆ ಈ ಬಿಜೆಪಿ ಟೋಪಿ ಹಾಕೋದು. ಜನಗಳಿಗೋಸ್ಕರನೇ ಈ ಬಿಜೆಪಿ ಟೋಪಿ. ಅವ್ರು ನಮಗೆ ಹಾಕ್ತಿದ್ದಾರೆ, ನಾವೂ ಅವರಿಗೆ ಹಾಕ್ತಾ ಇದ್ದೀವಿ’ ಎಂದು ಸಚಿವ ಈಶ್ವರಪ್ಪ ಹೇಳಿದರು
ಒಂದು ಟೋಪಿಯ ಕಥೆ..
ಅರ್ಥ ಮಾಡ್ಕೊಳ್ಳಿಕ್ಕೆ ಸುಮಾರು ವಿಷಯ ಇದೆ ಇದರಲ್ಲಿ …😂🤣 pic.twitter.com/SZ2b0BdDRs
— ಪ್ರದೀಪ್ ಶೆಟ್ಟಿ (@pradeepshettyn) April 11, 2022