No Result
View All Result
ಪಟಾಕಿ ಸಿಡಿದು ಸಚಿವ ಕೆಎನ್ ರಾಜಣ್ಣ ಕಣ್ಣಿಗೆ ಗಾಯವಾದ ಘಟನೆ ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ನಡೆದಿದೆ.
ಕುಣಿಗಲ್ ಮಾರ್ಗವಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ತಮ್ಮ ಉಸ್ತುವಾರಿ ಜಿಲ್ಲೆಯಾದ ಹಾಸನಕ್ಕೆ ತೆರಳುವಾಗ, ಮಂತ್ರಿಗಳನ್ನು ಕುಣಿಗಲ್ ಕಾಂಗ್ರೆಸ್ ಕಾರ್ಯಕರ್ತರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಪಟಾಕಿ ಸಿಡಿಸಿ ಬರಮಾಡಿಕೊಳ್ಳುವಾಗ ಸಚಿವ ಕೆಎನ್ ರಾಜಣ್ಣ ಅವರು ಕನ್ನಡಕ ಧರಿಸಿದ್ದರೂ, ಬಲಗಣ್ಣಿನ ರೆಪ್ಪೆಯ ಕೆಳಗೆ ಪಟಾಕಿಯ ಕಿಡಿ ತಾಕಿದೆ.
ಕೂಡಲೇ ಸಚಿವ ಕೆಎನ್ ರಾಜಣ್ಣರನ್ನು ಪಟ್ಟಣದ ಎಂಎಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ನೇತ್ರತಜ್ಱ ಡಾ.ರವಿಕುಮಾರ್ ಚಿಕಿತ್ಸೆ ನೀಡಿದ್ದಾರೆ.
ಅದೃಷ್ಟವಶಾತ್ ಸಚಿವ ಕೆಎನ್ ರಾಜಣ್ಣ ಕಣ್ಣಿಗೆ ಹೆಚ್ಚಿನ ಸಮಸ್ಯೆ ಆಗಿಲ್ಲ. ಚಿಕಿತ್ಸೆ ನಂತರ ಉಸ್ತುವಾರಿ ಮಂತ್ರಿಗಳು ಹಾಸನದತ್ತ ಪಯಣ ಬೆಳೆಸಿದರು.
No Result
View All Result
error: Content is protected !!