ಆಹಾರ ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಗಳವಾರ ರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸಚಿವ ಕತ್ತಿ ಅವರಿಗೆ ಹೃದಯಾಘಾತವಾಗಿದೆ.
ಬಾತ್ರೂಂಗೆ ಹೋಗಿದ್ದ ಕತ್ತಿ ಅವರು ಕೆಲವು ನಿಮಿಷವಾದರೂ ಹೊರಬರದ ಕಾರಣ ಅನುಮಾನಗೊಂಡು ಮನೆಯವರು ಹೋಗಿ ನೋಡಿದಾಗ ಕತ್ತಿ ಅವರು ಬಾತ್ರೂಂನಲ್ಲಿ ಕುಸಿದು ಬಿದ್ದಿದ್ದರು.
ಬಾತ್ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕತ್ತಿ ಅವರನ್ನು ತಕ್ಷಣವೇ ಸಮೀಪದಲ್ಲೇ ಇರುವ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಆದರೆ ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ADVERTISEMENT
ADVERTISEMENT