ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್ ಅವರನ್ನು ಆಯ್ಕೆ ಮಾಡಿ ಕಳುಹಿಸಿರುವ ಹೊತ್ತಲ್ಲೇ, ಹಿಂದಿ ಹೇರಿಕೆಯ ಕರಿ ನೆರಳು ರಾಜ್ಯದ ಮೇಲೆ ಬಿದ್ದಿದೆ. 2014 ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಐಬಿಪಿಎಸ್ಗೆ ತಂದ ನೂತನ ನಿಯಮಗಳಿಂದ ರಾಜ್ಯದ ಎಲ್ಲೆಡೆ ಬ್ಯಾಂಕ್ಗಳಲ್ಲಿ ಹಿಂದಿ ನೌಕರರು ತುಂಬಿ ಕೊಂಡಿದ್ದಾರೆ.
ಇದೀಗ, ಕಲಬುರ್ಗಿಯ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿ ಗ್ರಾಮೀಣ ಭಾಗದ ಕನ್ನಡಿಗರು ಬ್ಯಾಂಕ್ ಸೇವೆ ಕೇಳಿ ಬಂದಾಗ ಕನ್ನಡಿಗ ಗ್ರಾಹಕರ ಮೇಲೆ ಹಲ್ಲೆಗೆ ಯತ್ನಿಸಿ ರಾಜ್ಯದಲ್ಲಿಯೇ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ.
ರಾಜ್ಯದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಆಕ್ರೋಶ ಕೇಳಿ ಬರುತ್ತಿರುವ ಹೊತ್ತಲ್ಲೇ, ಮತ್ತೆ ಹಿಂದಿ ಹೇರಿಕೆಯ ಸಾಕ್ಷಿ ಹೊರಬಿದ್ದಿದೆ.
ಕನ್ನಡಿಗರ ಮೇಲಿನ ಹಿಂದಿವಾಲಾಗಳ ಈ ದಬ್ಬಾಳಿಕೆಗೆ ಕನ್ನಡ ಹೋರಾಟಗಾರರು ಹಾಗೂ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವೀಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ಹಿಂದಿ ಬ್ಯಾಂಕ್ ನೌಕರರ ವರ್ತನೆಯನ್ನು ನೋಡಬಹುದಾಗಿದೆ.
ಈ ವೀಡಿಯೋದಲ್ಲಿನ ಸಂಭಾಷಣೆ ಇಂತಿದೆ:
ಪಾಸ್ ಬುಕ್ ಎಂಟ್ರಿ ಮಾಡಿಕೊಡಲು ಕನ್ನಡಿಗರು ಬ್ಯಾಂಕಿನ ಸಿಬ್ಬಂದಿಯ ಹತ್ತಿರ ಕೇಳಿಕೊಂಡಿದ್ದಾರೆ. ಆಗ ಬ್ಯಾಂಕಿನ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡುತ್ತಲೇ ಇಲ್ಲಿ ಪ್ರಿಂಟಿಂಗ್ ಮಾಡಲ್ಲ ಎಂದಿದ್ದಾರೆ.
ಈ ವೇಳೆ ಬಂದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಹಿಂದಿ ಬೇಕಾದರೆ ಬ್ಯಾಂಕ್ನಿಂದ ಹೊರಗೆ ಹೋಗಿ. ಇಲ್ಲಿ ಕನ್ನಡ ಮಾತನಾಡಲ್ಲ. ಇದು ರಾಷ್ಟ್ರೀಯ ಬ್ಯಾಂಕ್ ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡು ಎಂದು ಬ್ಯಅಂಕ್ ಸಿಬ್ಬಂದಿ ಕನ್ನಡಿಗನ ವಿರುದ್ಧ ಹರಿಹಾಯ್ದು ಬಂದಿದ್ದಾನೆ.
ಮುಂದುವರೆದು ಮಾತನಾಡಿದ ಅವರು ಹಿಂದಿಯಲ್ಲಿ ಮಾತನಾಡಿ, ಹಿಂದಿ ರಾಷ್ಟ್ರೀಯ ಭಾಷೆ. ಇಲ್ಲವೆಂದರೆ ಹೊರಗಡೆ ನಡೆ. ಇದು ಭಾರತ ದೇಶ, ಕನ್ನಡ ದೇಶ ಅಲ್ಲ ಎಂದಾಗ ಕನ್ನಡಿಗ ಇಲ್ಲಿ ಯಾರೂ ಇಂಗ್ಲೀಷ್, ಹಿಂದಿಯಲ್ಲಿ ಜನಿಸಿಲ್ಲ ಎಂದಾಗ, ಇದು ಭಾರತ ದೇಶ ಇಲ್ಲಿ ಹಿಂದಿಯಲ್ಲಿಯೇ ಮಾತನಾಡಬೇಕು ಎಂದು ಗ್ರಾಮೀಣ ಭಾಗದ ಕನ್ನಡಿಗರ ಮೇಲೆ ಹಿಂದಿ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.
ಇನ್ನೊಬ್ಬ ಬ್ಯಾಂಕ್ ಸಿಬ್ಬಂದಿ ಕನ್ನಡ ಭಾಷೆ ಬೇಕಾದರೆ ಬೇರೆ ಬ್ಯಾಂಕ್ಗೆ ಹೋಗಿ ಎಂದು ಕನ್ನಡಿಗರ ವಿರುದ್ಧ ಹರಿಹಾಯ್ದಿದ್ದಲ್ಲದೇ ಹಲ್ಲೆಗೆ ಯತ್ನಿಸಿದ್ದಾರೆ. ಇಷಟು ಮಾತುಕತೆಗಳು ನಡೆದಾಗ್ಯೂ ಸಹ ಬ್ಯಅಂಕ್ ಸಿಬ್ಬಂದಿ ಒಂದೇ ಒಂದು ಕನ್ನಡ ಪದ ಬಳಸದೇ ಹಿಂದಿಯಲ್ಲಿಯೇ ಮಾತನಾಡಿದ್ದಾರೆ.
2019 ರಲ್ಲಿ ರಾಜ್ಯದ ಮಂಗಳೂರಿನ ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಗಿತ್ತು.
ಈ ಬಗ್ಗೆ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿ, 2014 ರಲ್ಲಿ ಐಬಿಪಿಎಸ್ಗೆ ತಂದ ನಿಯಮದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.