ಬೆಳ್ತಂಗಡಿ ತಾಲೂಕಿನ ಅನಿಲ್ ಪ್ರವೀಣ್ ಪಿರೇರಾ ಎಂಬವರು ಕಾಣೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿಯಾಗಿರುವ ಲವಿಟ ಡಿಸೋಜಾ ಅವರು ತಮ್ಮ ಪತಿ ಅನಿಲ್ ಪ್ರವೀಣ್ ಪಿರೇರಾ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಅನಿಲ್ ಪ್ರವೀಣ್ ಪಿರೇರಾ ಅವರು ವಿನ್ ನ್ಯಾಷನಲ್ ಸ್ಪೆಲ್ ಬೀ ನಲ್ಲಿ ಪ್ರಾದೇಶಿಕ ಸಮನ್ವಯಕಾರರಾಗಿದ್ದರೆ. ಸೆಪ್ಟೆಂಬರ್ 2ರಂದು ಸಂಜೆ 8.30ಕ್ಕೆ ವಿನ್ ನ್ಯಾಷನಲ್ ಸ್ಪೆಲ್ ಬೀ ತರಬೇತಿಯ ಐದು ಜನ ಮಕ್ಕಳನ್ನು ಬೆಂಗಳೂರಿಗೆ ಎಕ್ಸಾಂಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಸೆಪ್ಟೆಂಬರ್ 3ರಂದು ರಾತ್ರಿ 8.45ಕ್ಕೆ ಬಸ್ಸು ಇದ್ದು, ಇನ್ನು ಹೊರಡಬೇಕಿದೆ ಎಂದು ಹೇಳಿದ್ದರು.