38 ವರ್ಷಗಳ ಹಿಂದೆ ಪಾಕಿಸ್ತಾನದ (Pakistan) ವಿರುದ್ಧದ ಕಾರ್ಯಾಚರಣೆ ವೇಳೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ (Avalanche) ಹುತಾತ್ಮರಾಗಿದ್ದ ಯೋಧನ ಪಾರ್ಥಿವ ಶರೀರ ಈಗ ಲಭ್ಯ ಆಗಿದೆ.
ಸೇನೆಯಿಂದ ಹುತಾತ್ಮ ಯೋಧ ಚಂದ್ರಶೇಖರ್ ಹರ್ಬೋಲಾಗೆ (Chandrashekhar Harbola) ನೀಡಲಾಗಿರುವ ಸಂಖ್ಯೆ ಉಳ್ಳ ಡಿಸ್ಕ್ನ್ನು ಆಧರಿಸಿ ಮೃತದೇಹದ ಗುರುತನ್ನು ಪತ್ತೆ ಹಚ್ಚಲಾಗಿದೆ.
ರಾಣಿಖೇತ್ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ನ ಸೈನಿಕರು ಗಸ್ತು ವೇಳೆ ಸಿಯಾಚಿನ್ನ (Siachen) ಹಿಮ ಆವರಿತ ಬಂಕರ್ನಲ್ಲಿದ್ದ ಪಾರ್ಥಿವ ಶರೀರವನ್ನು ಪತ್ತೆ ಹಚ್ಚಿದ್ದಾರೆ.
1984ರಲ್ಲಿ ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆಗೆ ಆಪರೇಷನ್ ಮೇಘದೂತದ (Operation Meghdoot) ಭಾಗವಾಗಿ 20 ಸೈನಿಕರ ಪಡೆಯನ್ನು ಸಿಯಾಚಿನ್ಗೆ ಕಳುಹಿಸಿಕೊಡಲಾಗಿತ್ತು.
ಆದರೆ ದುರಾದೃಷ್ಟವಶಾತ್ ಮೇ 29, 1984ರಲ್ಲಿ ಹಿಮಪಾತದಲ್ಲಿ 20 ಸೈನಿಕರೂ ಕೊಚ್ಚಿಕೊಂಡು ಹೋಗಿದ್ದರು. ಇವರಲ್ಲಿ 15 ಮಂದಿಯ ಪಾರ್ಥಿವ ಶರೀರವಷ್ಟೇ ಸಿಕ್ಕಿತ್ತು.
ಚಂದ್ರಶೇಖರ್ ಸೇರಿದಂತೆ ಉಳಿದ ಐವರ ಪಾರ್ಥಿವ ಶರೀರ ಸಿಕ್ಕಿರಲಿಲ್ಲ.
ಇದನ್ನೂ ಓದಿ:
DBoss: ನಟ ದರ್ಶನ್ ಓದುತ್ತಿರುವ ಆ ಪುಸ್ತಕದ ವಿಶೇಷತೆ ಏನು ಗೊತ್ತಾ..?
ADVERTISEMENT
ಚಂದ್ರಶೇಖರ್ ಅವರು ರಾಜಸ್ಥಾನ (Rajasthan) ಮೂಲದವರು. ಇವರ ಪತ್ನಿ ಶಾಂತಿದೇವಿ ಅಲ್ಮೋರಾದಲ್ಲಿ (Almora) ವಾಸಿಸುತ್ತಿದ್ದಾರೆ.
ಈ ದುರಂತ ಸಂಭವಿಸುವ ವೇಳೆ ಶಾಂತಿದೇವಿ ಮತ್ತು ಚಂದ್ರಶೇಖರ್ ದಂಪತಿ ಮದುವೆ ಆಗಿ 9 ವರ್ಷ ಕಳೆದಿತ್ತು ಮತ್ತು ಇವರ ಹಿರಿ ಮಗಳು ಒಂಭತ್ತು ವರ್ಷ ಮತ್ತು ಕಿರಿ ಮಗಳು ಒಂದೂವರೆ ವರ್ಷದವರಾಗಿದ್ದರು.
ಚಂದ್ರಶೇಖರ್ ಹರ್ಬೋಲಾ ಅವರ ಪಾರ್ಥಿವ ಶರೀರದ ಜೊತೆಗೆ ಇನ್ನೊಂದು ಪಾರ್ಥಿವ ಶರೀರ ಸಿಕ್ಕಿರುವ ಮಾಹಿತಿ ಇದೆಯಾದರೂ ಗುರುತು ಪತ್ತೆ ಆಗಿಲ್ಲ.
ADVERTISEMENT