ಮಾಜಿ ಕ್ರಿಕೇಟ್ ಆಟಗಾರ್ತಿ ಮಿಥಾಲಿ ರಾಜ್ (Mithali Raj) ಇಂದು ಹೈದ್ರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಬೇಟಿಯಾಗಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ ಮಿಥಾಲಿ ರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇಂದು ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೈದ್ರಾಬಾದ್ಗೆ ಬಂದಿದ್ದಾರೆ. ಈ ವೇಳೆ ಬಿಜೆಪಿ ಕಚೇರಿಗೆ ಹೋಗಿರುವ ಮಿಥಾಲಿ ರಾಜ್ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿಯ ನೆಲೆ ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಹರಸಾಹಸ ಪಡುತ್ತಿದೆ. ಕಳೆದ 1 ವರ್ಷದಿಂದೀಚೆಗೆ ತೆಲಂಗಾಣದಲ್ಲಿಯೇ ಕೇಂದ್ರ ಬಿಜೆಪಿ ಹೈಕಮಾಂಡ್ ತಮ್ಮ ಗಮನ ಹರಿಸಿದೆ. ಇತ್ತೀಚೆಗೆ, ದಕ್ಷಿಣ ಭಾರತದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನೂ ಹೈದ್ರಾಬಾದ್ನಲ್ಲಿ ಮಾಡಿತ್ತು.
ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್ಗೆ ಆಟಗಾರ್ತಿ ‘ಮಿಥಾಲಿ ರಾಜ್’ ನಿವೃತ್ತಿ ಘೋಷಣೆ
ತಮ್ಮ ನೆಲೆ ವಿಸ್ತರಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಖ್ಯಾತ ಕ್ರಿಕೇಟ್ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಜೆಪಿ ನಡ್ಡಾ ಮತ್ತು ಮಿಥಾಲಿ ರಾಜ್ ನಡುವೆ ಅಧಿಕೃತವಾಗಿ ಮಾತುಕತೆ ನಡೆದಿದೆ. ಮಿಥಾಲಿ ರಾಜ್ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಆಟಗಾರ್ತಿ ಮಿಥಾಲಿ ರಾಜ್ (Mithali Raj) ಭಾರತೀಯ ಮಹಿಳಾ ಕ್ರಿಕೇಟ್ ತಂಡದ ನಾಯಕಿಯಾಗಿದ್ದರು. ತಮ್ಮ ನಾಯಕತ್ವ ಹಾಗೂ ಬ್ಯಾಟಿಂಗ್ನಿಂದಾಗಿ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ಇದೇ ವರ್ಷದ ಜೂನ್ 8 ರಂದು ಮಹಿಳಾ ಕ್ರಿಕೆಟ್ ತಂಡದ ನಾಯಕತ್ವ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ನಲ್ಲಿ ವಿಶ್ವದಾಖಲೆ : ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ‘ಮಿಥಾಲಿ ರಾಜ್’