ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಗೆ ಬಿದ್ದಿದೆ. ಪಂಚ ರಾಜ್ಯಗಳ ಪೈಕಿ ಒಂದು ರಾಜ್ಯವಾದ ಮಿಜೋರಾಂ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ
ಮಿಜೋರಾಂನಲ್ಲಿ ZPM ಅಧಿಕಾರಕ್ಕೆ ಬಂದಿದೆ.ಒಟ್ಟು ೪೦ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷ ೧೬ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಉಳಿದ ೧೧ ಕ್ಷೇತ್ರಗಳಲ್ಲಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಎನ್ಡಿಎ ಭಾಗವಾಗಿರುವ ಮಿಜೋರಾಂ ನ್ಯಾಷನಲ್ ಫ್ರಂಟ್ ೩ ಸ್ಥಾನಗಳನ್ನು ಗೆದ್ದುಕೊಂಡಿದ್ದು ೭ರಲ್ಲಿ ಮುನ್ನಡೆ ಸಾಧಿಸಿದೆ. ಮತ್ತು ಮಿತ್ರ ಪಕ್ಷ ಬಿಜೆಪಿ ೨ ಸ್ಥಾನಗಳನ್ನು ಗೆದ್ದುಕೊಂಡಿದೆ.
ಕಾಂಗ್ರೆಸ್ ಕೇವಲ ೧ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.ಮಿಜೋರಾಂ ವಿಧಾನಸಭಾ ಫಲಿತಾಂಶ: ZPM ಅಧಿಕಾರಕ್ಕೆ