ಮುಖ್ಯಮಂತ್ರಿ ಕೈಗೊಂಡಿದ್ದ ರೋಡ್ ಶೋ ವೇಳೆ ಪಕ್ಕದಲ್ಲೇ ನಿಂತಿದ್ದ ಪಕ್ಷದ ಮಹಿಳಾ ನಾಯಕಿಗೆ ಶಾಸಕರೊಬ್ಬರು ಮುತ್ತು ಕೊಟ್ಟಿರುವ ವೀಡಿಯೋವೊಂದು ಹರಿದಾಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೈಗೊಂಡಿದ್ದ ರೋಡ್ ಶೋ ವೇಳೆ ಶಿಂಧೆ ಬಣದ ಶಾಸಕ ಪ್ರಕಾಶ್ ಸುರ್ವೆ ಮತ್ತು ಪಕ್ಷದ ನಾಯಕಿ ಶೀತಲ್ ಅವರು ಪಕ್ಕಪಕ್ಕ ನಿಂತಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ಈ ವೀಡಿಯೋವನ್ನು ಈಗ ಬಿಆರ್ಎಸ್ ಪಕ್ಷದ ನಾಯಕರು ಕೂಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
What’s happening here, right beside CM Eknath Shinde?
pic.twitter.com/6Q2s01z7Fe
— YSR (@ysathishreddy) March 12, 2023
ಆದರೆ ವೀಡಿಯೋ ನಕಲಿ ಎಂದು ಶಾಸಕ ಸುರ್ವೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಮನಸ್ ಕುವರ್ ಮತ್ತು ಅಶೋಕ್ ಮಿಶ್ರಾ ಎಂಬ ಇಬ್ಬರನ್ನು ನಕಲಿ ವೀಡಿಯೋ ಹಂಚಿದ್ದರ ಆರೋಪ ಸಂಬಂಧ ಬಂಧಿಸಲಾಗಿದೆ.
ಇತ್ತ ಶೀತಲ್ ಮಾತ್ರೆ ಅವರು ವೀಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
ಮಾತೋಶ್ರೀ ಎಂಬ ಎಫ್ಬಿ ಖಾತೆಯಿಂದ ಈ ನಕಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಹಂಚಿಕೊಳ್ಳುವಾಗ ಬಾಳಾಸಾಹೇಬ್ ಅವರು ಕಲಿಸಿದ ಸಂಸ್ಕಾರ ನೆನೆಪಾಗ್ಲಿಲ್ವಾ..? ಮಹಿಳೆಯ ಚಾರಿತ್ರ್ಯ ವಧೆ ಮಾಡುವುದು ಎಷ್ಟು ಸರಿ..?
ಎಂದು ಪ್ರಶ್ನಿಸಿದ್ದಾರೆ.
राजकारणामधील महिलेसंदर्भात बोलण्यासारखे काही नसले तर तिचे चारित्र्यहनन करणे हेच उद्ध्वस्त गटाचे संस्कार आहेत?? मातोश्री नावाच्या fb पेजवरुन एका स्त्री संदर्भात असा morphed video upload करताना बाळासाहेबांचे संस्कार नाही का आठवले? pic.twitter.com/rpaqbMtiZU
— sheetal mhatre (@sheetalmhatre1) March 11, 2023