ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಕಾರ್ಯ ವೈಖರಿಯಿಂದ ನೊಂದಿರುವ ಸಂತ್ರಸ್ತರ ಪರವಾಗಿ “ಉದ್ಯೋಗ ಸೌಧ” ದ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸಚಿವ ಸುರೇಶ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಸೋಮವಾರ 150ಕ್ಕೂ ಅಧಿಕ ಸಂಖ್ಯೆಯ ಯುವಕರು ಮತ್ತು ಯುವತಿಯರು ಸುರೇಶ್ ಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ಇವರ ಸಮಸ್ಯೆಗೆ ಸ್ಪಂದಿಸಿದ ಸುರೇಶ್ ಕುಮಾರ್, ಇಂದು ಸಂತ್ರಸ್ತರ ಪರ ಧ್ವನಿಯಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಇನ್ನು ತಮ್ಮ ವಶಕ್ಕೆ ಪಡೆದಿರುವ ಬಗ್ಗೆ ಆಕ್ರೋಶ ಹೊರಹಾಕಿರುವ ಅವರು, ಕೆಪಿಎಸ್ಸಿ ಕಟ್ಟಡ “ಉದ್ಯೋಗ ಸೌಧ” ದ ಮುಂದೆ ಉದ್ಯೋಗಾಕಾಂಕ್ಷಿ ಯುವಕ/ತಿಯರ ಪರವಾಗಿ ನ್ಯಾಯ ಕೋರುತ್ತಾ ಕುಳಿತಿದ್ದ ನನ್ನನ್ನು ಪೊಲೀಸ ರು ವಶಕ್ಕೆ ತೆಗೆದುಕೊಂಡಿದ್ದಾರೆ. ಆಯೋಗದಿಂದ ಸಮರ್ಪಕವಾಗಿ ಉತ್ತರ ಕೊಡಲು ಯಾರೂ ಬರಲಿಲ್ಲ, ಅಥವಾ ಬರುವ ಧೈರ್ಯ ತೋರಲಿಲ್ಲ. ಆಯೋಗಕ್ಕೆ “ಒಳ ಜಗಳ ನಿಲ್ಲಿಸಿ, ನ್ಯಾಯ ನೀಡಿ” ಎಂದು ಆಗ್ರಹಿಸಿದ್ದಾರೆ.