ಕೋನಸೀಮಾ ಜಿಲ್ಲೆಯ ಹೆಸರನ್ನು ಮರು ನಾಮಕರಣ ಮಾಡಿದ್ದರಿಂದ ಆಕ್ರೋಶಗೊಂಡ ಜನರು ಸಾರಿಗೆ ಸಚಿವರ ಮನೆಗೆ ಬೆಂಕಿ ಹಾಕಿರುವ ಘಟನೆ ಆಂಧ್ರಪ್ರದೇಶದ ಅಮಲಾಪುರಂನಲ್ಲಿ ನಡೆದಿದೆ.
ಉದ್ರಿಕ್ತರ ಗುಂಪು ಸಾರಿಗೆ ಸಚಿವ ಕೆ ವಿಶ್ವರೂಪ ಅವರ ಮನೆ, ಪೊಲೀಸ್ ವಾಹನ ಮತ್ತು ಕಾಲೇಜು ಬಸ್ ಗೆ ಬೆಂಕಿ ಹಾಕಿದೆ.
ಕೋನಸೀಮಾ ಜಿಲ್ಲೆಯ ಹೆಸರನ್ನು ಬಿ ಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯೆಂದು ಮರು ನಾಮಕರಣ ಮಾಡಲಾಗಿದೆ.
ಆದರೆ ಮರು ನಾಮಕರಣಕ್ಕೆ ಕೋನಾಸೀಮಾ ಸಾಧನ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಇವತ್ತು ಪ್ರತಿಭಟನೆಯನ್ನು ತಡೆಯಲು ಯತ್ನಿಸಿದ ವೇಳೆ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು.