ಮೊಬೈಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ರೆಡ್ಹ್ಯಾಂಡಾಗಿ ಹಿಡಿದ ಸಂಚಾರಿ ಪೊಲೀಸರು ಆತನಿಂದ ಮೊಬೈಲ್ ವಶಕ್ಕೆ ಪಡೆದು ಮಹಿಳೆಯರಿಗೆ ಹಸ್ತಾಂತರಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಎಗರಿಸ್ತಿದ್ದ ಅಸಾಮಿಯನ್ನು ವಶಕ್ಕೆ ಪಡೆದಿದ್ದಾರೆ.
ಬನಶಂಕರಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಬೆಟ್ಟಸ್ವಾಮಿ ಮತ್ತು ಪೊಲೀಸ್ ಕಾನ್ಸ್ಸ್ಟೇಬಲ್ ಕಾಶಿರಾಮ್ ರವರು ಮೊಬೈಲ್ ಕಳ್ಳತನ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಬನಶಂಕರಿ ಪೊಲೀಸರ ವಶಕ್ಕೆ ನೀಡಿದ್ದು ಇಬ್ಬರು ಮಹಿಳೆಯರು ಕಳೆದುಕೊಂಡಿದ್ದ ಮೊಬೈಲನ್ನು ವಾಪಸ್ ಕೊಡಿಸಿರುತ್ತಾರೆ
ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ADVERTISEMENT
ADVERTISEMENT