ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕರ್ನಾಟಕದಿಂದ ಪ್ರತಿನಿಧಿಸುವ ಐವರು ಸಂಸದರಿಗೆ ಸಚಿವ ಸ್ಥಾನ ಸಿಕ್ಕಿದೆ.
ಅವರಲ್ಲಿ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ವಿಧಾನಸಭೆಯಿಂದ ಪ್ರತಿನಿಧಿಸುವ ರಾಜ್ಯಸಭೆ ಸಂಸದೆ.
ಮೋದಿ ಸರ್ಕಾರದಲ್ಲಿ ಮಂತ್ರಿಗಿರಿ ಪಡೆದುಕೊಂಡಿರುವುದು ಎಲ್ಲ ಐವರೂ ಕೂಡಾ ಮೇಲ್ವರ್ಗದವರೇ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಹೆಚ್ ಡಿ ಕುಮಾರಸ್ವಾಮಿ ಅವರು ಒಕ್ಕಲಿಗರು. ಜೆಡಿಎಸ್ ಪಕ್ಷದಿಂದ ಕೋಲಾರ ಎಸ್ ಸಿ ಮೀಸಲು ಕ್ಷೇತ್ರದಿಂದ ಮಲ್ಲೇಶ್ ಬಾಬು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಬಿಜೆಪಿ ಕೋಟಾದಡಿ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಮತ್ತು ನಿರ್ಮಲಾ ಸೀತಾರಾಮನ್ ಇಬ್ಬರೂ ಬ್ರಾಹ್ಮಣರು. ಇವರಿಬ್ಬರನ್ನೂ ಈ ಬಾರಿಯೂ ಕ್ಯಾಬಿನೆಟ್ ಸ್ಥಾನಮಾನ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ತುಮಕೂರು ಸಂಸದ ವಿ ಸೋಮಣ್ಣ ಲಿಂಗಾಯತರು ಮತ್ತು ಬೆಂಗಳೂರು ಉತ್ತರದಿಂದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಒಕ್ಕಲಿಗರು.
ಅಂದರೆ ಮೋದಿ ಸಂಪುಟ ಸೇರಿರುವ ಐವರಲ್ಲಿ ಇಬ್ಬರು ಬ್ರಾಹ್ಮಣರು, ಇಬ್ಬರು ಒಕ್ಕಲಿಗರು ಮತ್ತು ಒಬ್ಬರು ಲಿಂಗಾಯತರು.
ಹಿಂದ ವರ್ಗ (ಹಿಂದುಳಿದ, ದಲಿತ ವರ್ಗ)ಕ್ಕೆ ಕರ್ನಾಟಕದ ಕೋಟಾದಡಿ ಸಚಿವ ಸ್ಥಾನವೇ ಸಿಕ್ಕಿಲ್ಲ.
ಮೋದಿ ಅವರ ಮೊದಲನೇ ಅವಧಿಯಲ್ಲಿ 2016ರಿಂದ 2019ರವರೆಗೆ ವಿಜಯಪುರ ಎಸ್ ಸಿ ಮೀಸಲು ಕ್ಷೇತ್ರದ ಸಂಸದರಾಗಿದ್ದ ರಮೇಶ್ ಜಿಗಜಿಣಗಿ ಅವರು ಮೂರು ವರ್ಷದ ಅವಧಿಗೆ ಮಂತ್ರಿ ಆಗಿದ್ದರು.
ಎರಡನೇ ಅವಧಿಯಲ್ಲಿ ಚಿತ್ರದುರ್ಗ ಸಂಸದರಾಗಿದ್ದ ಎ ನಾರಾಯಣಸ್ವಾಮಿ ಅವರು 2021ರಿಂದ ಕೇಂದ್ರ ಸಚಿವರಾಗಿದ್ದರು. ಆದರೆ ಇವರಿಬ್ಬರೂ ರಾಜ್ಯಖಾತೆ ಸಚಿವರಾಗಿದ್ದರೆ ಕ್ಯಾಬಿನೆಟ್ ದರ್ಜೆ ಸಚಿವರಾಗಿರಲಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಎಸ್ಟಿ ಮತ್ತು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯೇ ಗೆದ್ದಿತ್ತು.
ಈ ಬಾರಿ ಮೀಸಲು ಕ್ಷೇತ್ರದಿಂದ ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಗೆದ್ದಿದ್ದಾರೆ.
ADVERTISEMENT
ADVERTISEMENT