ಭಾರತದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಭಾರತ ತಲೆ ತಗ್ಗಿಸಬೇಕಾಗಿದೆ ಎಂದು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮೋದಿ ಸರ್ಕಾರದ 8 ವರ್ಷಗಳ ಅವಧಿಯಲ್ಲಿ, ಭಾರತ ಮಾತೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿ ಬಂತು. ಏಕೆಂದರೆ ನಾವು ಲಡಾಖ್ನಲ್ಲಿ ಚೀನಿಯರ ಎದುರು ತೆವಳಿ ನಡೆಯಬೇಕಾಯಿತು, ರಷ್ಯನ್ನರ ಮುಂದೆ ಮಂಡಿಯೂರಬೇಕಾಯಿತು, ಕ್ವಾಡ್ ಸಭೆಯಲ್ಲಿ ಅಮೆರಿಕನ್ನರ ಮುಂದೆ ಮಿಯಾಂವ್ ಎನ್ನಬೇಕಾಯಿತು. ಈಗ ಚಿಕ್ಕ ರಾಷ್ಟ್ರ ಕತಾರ್ ಎದುರು ಸಾಷ್ಟಂಗ ನಮಸ್ಕಾರ ಮಾಡಿದ್ದೇವೆ. ನಮ್ಮ ವಿದೇಶಾಂಗ ನೀತಿಯ ಅಧಃಪತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
During Modi govt's 8 years, Bharat Mata had to hang her head in shame because we crawled before the Chinese on Ladakh, knelt before the Russians, meowed before the Americans in QUAD. But we did shastangam dandawat before the tiny Qatar. That was depravity of our foreign policy.
— Subramanian Swamy (@Swamy39) June 6, 2022
ಪ್ರವಾದಿ ಮುಹಮ್ಮದ್ ವಿರುದ್ಧದ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಕತಾರ್ ಮತ್ತು ಕುವೈತ್ನ ವಿದೇಶಾಂಗ ಸಚಿವಾಲಯಗಳು ಭಾರತದ ರಾಯಭಾರಿಗಳನ್ನು ಕರೆಸಿ ಖಂಡನಾ ನಿರ್ಣಯದ ಅಧಿಕೃತ ಟಿಪ್ಪಣಿಯನ್ನು ಹಸ್ತಾಂತರಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕತಾರ್ ಭೇಟಿ ವೇಳೆ ಈ ಬೆಳವಣಿಗೆ ನಡೆದಿದೆ. ಭಾರತದ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂಬ ಅಭಿಯಾನವೂ ಆ ದೇಶಗಳಲ್ಲಿ ನಡೆದಿದೆ.
Embassy's response to a media query regarding statement issued by MOFA, State of Kuwait on an offensive tweet in India: pic.twitter.com/8s0Qai0FWs
— India in Kuwait (@indembkwt) June 5, 2022
ಆದ್ದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಸುಬ್ರಮಣಿಯನ್ ಸ್ವಾಮಿ ಅವರು ಭಾರತದ ವಿದೇಶಾಂಗ ನೀತಿಯನ್ನು ಕಟು ವಿಮರ್ಶೆಗೆ ಒಳಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮೊಹಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇವರನ್ನು ಭಾನುವಾರ ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ.