ಸುಳ್ಳುಗಳನ್ನು ಬಯಲು ಮಾಡುವ ಮತ್ತು ಪ್ರವಾದಿ ಮಹಮ್ಮದರ ಬಗ್ಗೆ ಬಿಜೆಪಿ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ನೀಡಿದ್ದ ಪ್ರಚೋದನಕಾರಿ ಹೇಳಿಕೆಯನ್ನು ಬಯಲು ಮಾಡಿದ್ದ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮಹಮ್ಮದ್ ಜುಬೈರ್ ಬಂಧನಕ್ಕೆ ವ್ಯಾಪಕ ಖಂಡನೆ ಆಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟಿಸಿದ್ದಾರೆ. ಬಿಜೆಪಿಯ ಸುಳ್ಳು ಮತ್ತು ದ್ವೇಷವನ್ನು ಬಯಲು ಮಾಡುವ ಪ್ರತಿಯೊಬ್ಬರನ್ನೂ ಕಂಡರೂ ಅವರಿಗೆ ಭಯ. ಸತ್ಯದ ಒಂದು ಧ್ವನಿಯನ್ನು ಬಂಧಿಸಿದರೆ ನೂರು ಧ್ವನಿಗಳು ಎದ್ದು ನಿಲ್ಲುತ್ತವೆ.ನಿರಂಕುಶವಾದದ ವಿರುದ್ಧ ಸತ್ಯ ಯಾವತ್ತಿಗೂ ಜಯಿಸುತ್ತದೆ, ಭಯಪಡಬೇಡಿ’ ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಡಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಜುಬೈರ್ರನ್ನು ಬಂಧಿಸಿದನ್ನು ನಟಿ ಮತ್ತು ಮಾಜಿ ಸಂಸದೆ ರಮ್ಯಾ ಖಂಡಿಸಿದ್ದಾರೆ.
`ನೂಪುರ್ ಶರ್ಮಾ ಎಲ್ಲಿದ್ದಾರೆ..? ಆಕೆಯನ್ನು ಇನ್ನೂ ಯಾಕೆ ಬಂಧಿಸಿಲ್ಲ..? ಪ್ರವಾದಿ ಮಹಮ್ಮದ್ ಅವರ ಬಗ್ಗೆ ಪ್ರಚೋದನಾಕಾರಿ ಮಾತುಗಳನ್ನು ಆಡಿದ್ದು ಆಕೆ ಅಲ್ಲವೇ..? ಅದನ್ನು ಬಯಲು ಮಾಡಿದ್ದು ಮಹಮ್ಮದ್ ಜುಬೈರ್ ಅಲ್ಲವೇ..?’ ಎಂದು ರಮ್ಯಾ ಕಿಡಿಕಾರಿದ್ದಾರೆ.