* ನಿಮ್ಮ ಕೈಗೆ ವೇತನ (Salary ) ಬರುತ್ತಲೇ ಮೊದಲು ನಿಮ್ಮ ಅಗತ್ಯಗಳಿಗಾಗಿ ಖರ್ಚು ಮಾಡಿ. ನಂತರ ಇತರೆ ವಿಚಾರಗಳ ಬಗ್ಗೆ ಆಲೋಚಿಸಿ
* ತಿಂಗಳ ಬಜೆಟ್ (Monthly Budget)ರೂಪಿಸಿಕೊಳ್ಳಿ. ಸಾಧ್ಯವಾದಲ್ಲಿ ವಾರದ ಲೆಕ್ಕದಲ್ಲಿ ಖರ್ಚುವೆಚ್ಚಗಳನ್ನು (Weekly Expenditure)ವಿಭಜಿಸಿಕೊಂಡಲ್ಲಿ ಒಳ್ಳೆಯದು.
* ಹಣ ಉಳಿತಾಯ ಮಾಡಬೇಕೆಂದು ಕಳಪೆ ಗುಣಮಟ್ಟದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು (Electronic)ಮತ್ತು ಇತರೆ ವಸ್ತುಗಳನ್ನು ಖರೀದಿ ಮಾಡಬೇಡಿ. ಇದರಿಂದ ನಿಮ್ಮ ಖರ್ಚು ಇನ್ನಷ್ಟು ಹೆಚ್ಚಾಗುತ್ತದೆ.
* ಎಲ್ಲಿ ಮತ್ತು ಏಕೆ ಖರ್ಚು ಮಾಡಿದ್ವಿ ಎಂಬುದನ್ನು ತಿಂಗಳ ಕೊನೆಯಲ್ಲಿ ಪರಿಶೀಲಿಸಿಕೊಳ್ಳಿ.
* ಅನಗತ್ಯವಾಗಿ ಎಲ್ಲೆಲ್ಲಿ ಹಣ ಖರ್ಚಾಯಿತು ಎಂಬುದನ್ನು ಪಟ್ಟಿ ಮಾಡಿ.. ಮುಂದೆ ಇದಕ್ಕೆ ಕಡಿವಾಣ ಹಾಕಿ.
* ನಾಲ್ಕೈದು ತಿಂಗಳ ವೇತನಕ್ಕೆ ಸಮಾನವಾದ ಮೊತ್ತವನ್ನು ತುರ್ತು ನಿಧಿಯನ್ನಾಗಿ (Emergency Fund)ಮಾಡಿಕೊಳ್ಳಿ
* ನಿಮ್ಮ ಆರೋಗ್ಯ(Health), ಕುಟುಂಬ ಭದ್ರತೆಗಾಗಿ (Family Security )ಆರೋಗ್ಯ ವಿಮೆ(Health Insurance), ಲೈಫ್ ಇನ್ಶುರೆನ್ಸ್ (Life insurance)ಮಾಡಿಸಿ.
* ಹೂಡಿಕೆ (Investment)ಮಾಡುವ ಮುನ್ನ, ಅದರ ಬಗ್ಗೆ ಅಧ್ಯಯನ ಮಾಡಿ.. ಪೂರ್ಣವಾಗಿ ಅರ್ಥ ಮಾಡಿಕೊಂಡ ಮೇಲೆ ಹೂಡಿಕೆ ಆರಂಭಿಸಿ.
* ಯಾವುದೇ ವಿಷಯ ಇರಲಿ ಸಣ್ಣ ಸಣ್ಣ ರಿಸ್ಕ್ (Small Small Risk)ತೆಗೆದುಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ನಿಮ್ಮನ್ನು ಮಾನಸಿಕವಾಗಿ ಸದೃಢ ಮಾಡುತ್ತದೆ.
* ಇಎಂಐ(EMI), ಲೋನ್(Loan), ಕ್ರೆಡಿಟ್ ಕಾರ್ಡ್(CreditCard), ಇನ್ಸ್ಟಾಲ್ಮೆಂಟ್ (Instalment)ಪದ್ದತಿಯಲ್ಲಿ ಯಾವುದೇ ವಸ್ತು ಖರೀದಿ ಮಾಡಬೇಡಿ.
* ನಿಮ್ಮ ಬಳಿ ದುಡ್ಡು ಇದ್ದಲ್ಲಿ ಮಾತ್ರ ಖರೀದಿಸಿ.
* ಶಾಪಿಂಗ್ (Shopping)ತೆರಳುವ ಮುನ್ನ ಖರೀದಿ ಮಾಡಬೇಕಾದ ಅಗತ್ಯ ವಸ್ತುಗಳ ಪಟ್ಟಿ ಸಿದ್ದ ಮಾಡಿಕೊಳ್ಳಿ. ಅವುಗಳನ್ನು ಮಾತ್ರ ಖರೀದಿಸಿ.
* ಕೊನೆಯಲ್ಲಿ ನಿಮ್ಮ ಸಂಪಾದನೆ ಮೀರಿ ಖರ್ಚು ಮಾಡಬೇಡಿ.
* ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿ.. ಸಹನೆ ಇರಲಿ.