ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮ್ಯಾನ್ ಹಾಗೂ ಆತನ ತಾಯಿ ತೆಲಂಗಾಣ ಆಡಳಿತ ಸರ್ಕಾರದ 6 ಜನ ನಾಯಕರ ಮೇಲೆ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ(ಟಿಆರ್ಎಸ್)ದ 6 ಜನ ನಾಯಕರನ್ನು ಪೊಲೀಸರು ಕಾಮರೆಡ್ಡಿ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಮ್ ಸಂತೋಷ್ ಹಾಗೂ ಗಂಗಮ್ ಪದ್ಮ ಅವರು ಕಾಮರೆಡ್ಡಿ ಪೊಲೀಸ್ ಠಾಣೆಯಲ್ಲಿ ಟಿಆರ್ಎಸ್ ಪಕ್ಷದ 6 ಜನ ನಾಯಕರು ಹಾಗೂ ಸರ್ಕಲ್ ಪೊಲೀಸ್ ಇನ್ಸ್ಸ್ಪೆಕ್ಟರ್ ಮೇಲೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು.
ಆತ್ಮಹತ್ಯೆಗೆ ಶರಣಾಗಿರುವ ತಾಯಿ ಮತ್ತು ಮಗ ಆತ್ಮಹತ್ಯೆಗೂ ಮುಂಚೆ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಸಂತೋಷ್ 7 ಜನರ ಮೇಲೆ ಅವರ ಪೋಟೋ ಸಹಿತ ಆರೋಪ ಮಾಡಿದ್ದಾರೆ. ರಾಮಯಪೇಟ್ ಮುನ್ಸಿಪಾಲಿಟಿಯ ಅಧ್ಯಕ್ಷ ಪಲ್ಲೆ ಜಿತೇಂದರ್ ಗೌಡ್ ಅವರನ್ನು ಒಳಗೊಂಡಂತೆ 5 ಜನ ಟಿಆರ್ಎಸ್ ನಾಯಕರು ಹಾಗೂ ಸರ್ಕಲ್ ಇನ್ಸ್ಸ್ಪೆಕ್ಟರ್ ನಾಗಾರ್ಜುನ ರೆಡ್ಡಿ ಅವರು ತಮಗೆ ಕಿರುಕುಳ ಕೊಟ್ಟು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತೋಷ್ ಅವರು ಡೆತ್ ನೋಟ್ನ್ನು ಬರೆದಿಟ್ಟಿದ್ದು ಅದರಲ್ಲಿ ಈ ಮೇಲಿನ ಜನ ತಮ್ಮ ಬ್ಯುಸಿನೆಸ್ಗೆ ತೊಂದರೆ ಕೊಡುತ್ತಿದ್ದಾರೆ. ಮತ್ತು ನನ್ನ ಜೀವನವನ್ನು ಕಠಿಣ ಪರಿಸ್ಥಿತಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಡೆತ್ ನೋಟ್ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ 6 ಜನ ನಾಯಕರನ್ನು ಬಂಧಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.