ಕೊಟ್ಟ ಮಾತಿಗೆ ತಪ್ಪಿದ ಮೈಸೂರು-ಕೊಡಗು (Mysuru – Kodagu) ಸಂಸದ (MP) ಪ್ರತಾಪ್ ಸಿಂಹ (Pratap Simha) ಕ್ಷಮೆ ಕೋರಿದ್ದಾರೆ.
ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ ಎಂದಿದ್ದೆ, ನಂತರ ಆಗಸ್ಟ್ 15 ರಂದು ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದೆ. ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ. ಎಲ್ಲ ಪ್ರಯತ್ನಗಳ ನಡುವೆಯೂ ಇನ್ನೂ ವಾರ, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ, ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್…
ಎಂದು ಪ್ರತಾಪ್ ಸಿಂಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇವತ್ತು ಚನ್ನಪಟ್ಟಣ – ರಾಮನಗರ (Channapattana – Ramanagara Bypass) ಬೈಪಾಸ್ ನ ಗುಡ್ಡ ಕಡಿದು ರಸ್ತೆ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರತಾಪ್ ಸಿಂಹ ಅವರು ಅಲ್ಲಿಂದಲೇ ಲೈವ್ ವೀಡಿಯೋ ಮಾಡಿದ್ದಾರೆ.
10 ದಿನದ ಗಡುವು:
ಆ ವೀಡಿಯೋದಲ್ಲಿ ಸಂಸದ ಪ್ರತಾಪ್ ಸಿಂಹ ಅವರು 10 ದಿನದೊಳಗೆ ಚಾಮುಂಡೇಶ್ವರಿ ಆರ್ಶೀವಾದದಿಂದ ಕಾಮಗಾರಿಯನ್ನು ಮುಗಿಸಿ ಬೈಪಾಸ್ನ್ನು ಸಂಚಾರಕ್ಕೆ ಮುಕ್ತ ಮಾಡುವುದಾಗಿ ಮತ್ತೆ ವಾಗ್ದಾನ ಮಾಡಿದ್ದಾರೆ.