ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಎಡ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇತ್ತೀಚಿಗೆ ಮುಗಿದ ಐಪಿಎಲ್ ಟೂರ್ನಿಯಲ್ಲಿ ಮೊಣಕಾಲಿನ ಸಮಸ್ಯೆಯಿಂದ ಬಳಲಿದ್ದರು. ಆದರೂ, ಸಿಎಸ್ಕೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಕಪ್ ಗೆದ್ದ 48 ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆಗಾಗಿ ಅಹ್ಮದಾಬಾದ್ನಿಂದ ಮುಂಬೈ ತಲುಪಿದ್ದ ಧೋನಿಗೆ ಬಿಸಿಸಿಐ ಮೆಡಿಕಲ್ ಪ್ಯಾನಲ್ ಸದಸ್ಯರಾದ ಪಾರ್ದಿವಾಲಾ ನೇತೃತ್ವದ ತಜ್ಱ ವೈದ್ಯರ ತಂಡ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಆಪರೇಷನ್ ಮಾಡಿದ್ದಾರೆ.
ಸದ್ಯ ಧೋನಿ ಆಸ್ಪತ್ರೆಯಲ್ಲಿಯೇ ಇದ್ದಾರೆ. ಮುಂದಿನ ಎರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಕೆಲ ಕಾಲ ಮನೆಯಲ್ಲಿಯೇ ವಿಶ್ರಾಂತಿಪಡೆಯಲಿದ್ದಾರೆ. ಮುಂದಿನ ಐಪಿಎಲ್ಗೆ ತಯಾರಿ ನಡೆಸಲು ಸಾಕಷ್ಟು ಸಮಯ ಸಿಗಲಿದೆ
ಎಂದು ಸಿಎಸ್ಕೆ ಸಿಇಓ ವಿಶ್ವನಾಥನ್ ತಿಳಿಸಿದ್ದಾರೆ.
ಅಂದರೆ, ಮುಂದಿನ ಐಪಿಎಲ್ನಲ್ಲೂ ಧೋನಿ ಆಡಲಿದ್ದಾರೆ. ಧೋನಿ ನಿವೃತ್ತಿ ತೆಗೆದುಕೊಳ್ಳಲ್ಲ ಎಂಬ ಸುಳಿವನ್ನು ಸಿಎಸ್ಕೆ ಮ್ಯಾನೇಜ್ಮೆಂಟ್ ನೀಡಿದೆ.
ಪಾರ್ದಿವಾಲಾ ಅವರು ಈ ಹಿಂದೆ ರಿಷಬ್ ಪಂತ್, ನೀರಜ್ ಚೋಪ್ರಾಗೆ ಶಸ್ತ್ರಚಿಕಿತ್ಸೆ ಮಾಡಿದ್ದರು.
ADVERTISEMENT
ADVERTISEMENT