ಸ್ಟಾರ್ ನಟ ನಟಿಯರು, ಆಟಗಾರರು ಹಾಗೂ ಅಗ್ರಗಣ್ಯರು ಅನಾರೋಗ್ಯಕ್ಕೀಡಾದಾಗ ಅಥವಾ ವಿಶೇಕ್ಷ ಚಿಕಿತ್ಸೆಗಾಗಿ ವಿದೇಶಗಳ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಸ್ಟಾರ್ ನಟ ನಟಿಯರು, ಆಟಗಾರರು ಆಯುರ್ವೇದ ಚಿಕಿತ್ಸೆಯೆ ಮೊರೆ ಹೋಗಿದ್ದಾರೆ ಎಂದಾಗ ಎಲ್ಲರೂ ಹುಬ್ಬೇರಿಸುತ್ತಾರೆ.
ಇದೀಗ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯವರು ತಮ್ಮ ಮಂಡಿನೋವಿಗಾಗಿ ಆಯುರ್ವೇದದ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಅಲ್ಲದೇ. ಕೇವಲ 40 ರೂ.ಗಳಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆ ಮೂಲಕ ಎಂಎಸ್ ಧೋನಿ ಹಲವು ಜನರಿಗೆ ಮಾದರಿಯಾಗಿದ್ದಾರೆ.
ಸ್ಫೋಟಕ ಬ್ಯಾಟ್ಸ್ಮನ್ ಎಂಎಸ್ ಧೋನಿಯವರು ಹಲವು ತಿಂಗಳುಗಳಿಂದ ಮೊಣಕಾಲಿನ ನೋವಿನೊಂದಿಗೆ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನೋವಿನ ನಿವಾರಣೆಗೆ ಹಲವೆಡೆಗಳಲ್ಲಿ ಚಿಕಿತ್ಸೆಗಾಗಿ ಓಡಾಡುತ್ತಿದ್ದರು. ಆದರೆ, ಅದ್ಯಾವುದು ಧೋನಿಯವರು ನೋವು ಶಮನ ಮಾಡಿರಲಿಲ್ಲ.
ಪೋಷಕರಿಗೆ ಆಯುರ್ವೇದ ಚಿಕಿತ್ಸೆಯಲ್ಲಿ ಪೋಷಕರ ಮೊಣಕಾಲು ನೋವಿ ನಿವಾರಣೆಯಾಗಿದ್ದರಿಂದ ಧೋನಿ ಈ ಚಿಕಿತ್ಸೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ರಾಂಚಿಯಿಂದ ಸುಮಾರು 70 ಕಿಮೀ ದೂರದಲ್ಲಿರುವ ಲಪುಂಗ್ನ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಆಯುರ್ವೇದ ವೈದ್ಯ ವಂದನ್ ಸಿಂಗ್ ಖೇರ್ವಾರ್ ಅವರು ಕ್ರಿಕೆಟಿಗ ಎಂ.ಎಸ್. ದೋನಿಯವರ ಮೊಣಕಾಲು ನೋವಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ವೈದ್ಯ ವಂದನ್ ಸಿಂಗ್ ಖೇರ್ವಾರ್ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ಅವರು ಕ್ಯಾಲ್ಸಿಯಂ ಕೊರತೆಯಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ನಾನು ಅವರಿಗೆ ಸಮಾಲೋಚನೆ ಶುಲ್ಕವಾಗಿ 20 ರುಪಾಯಿ ವಿಧಿಸುತ್ತೇನೆ ಹಾಗೂ ಅವರಿಗೆ 20 ರುಪಾಯಿ ಮೌಲ್ಯದ ಔಷಧಗಳನ್ನು ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಧೋನಿ ನನ್ನನ್ನು ನೋಡಲು ಬಂದಾಗ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ ಅವರ ಪರಿವಾರದಲ್ಲಿದ್ದವರು ವೈದ್ಯರೇ, ದೋನಿ ನಿಮ್ಮನ್ನು ನೋಡಲು ಬಂದಿದ್ದಾರೆ ಎಂದು ಹೇಳಿದರು. ಆಗ ಧೋನಿಯವರನ್ನು ನೋಡಿ ಖುಷಿಯಾಯಿತು ಎಂದು ವಂದನ್ ಸಿಂಗ್ ಖೇರ್ವಾರ್ ಹೇಳಿದ್ದಾರೆ.