ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನ್ಮದಿನದ ಸಂಭ್ರಮ. 42ನೇ ವಸಂತಕ್ಕೆ ಕಾಲಿಟ್ಟ ಧೋನಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳ ಸಡಗರ, ಸಂಭ್ರಮ ಮುಗಿಲುಮುಟ್ಟಿದೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿ ಮೂರು ವರ್ಷ ಕಳೆದರೂ ಅವರ ಬಗ್ಗೆ ಅಭಿಮಾನಿಗಳಿಗೆ ಇರುವ ಕ್ರೇಜ್ ಎಳ್ಳಷ್ಟು ಕಡಿಮೆ ಆಗಿಲ್ಲ.
ಅದರಲ್ಲೂ ಸಿಎಸ್ಕೆ ಐದನೇ ಬಾರಿ ಐಪಿಎಲ್ ಚಾಂಪಿಯನ್ ಆಗುವುದರೊಂದಿಗೆ ಧೋನಿ ಮೇಲಿನ ಅಭಿಮಾನಿಗಳ ಪ್ರೀತಿ ಆಕಾಶದೆತ್ತರಕ್ಕೆ ಹೋಗಿದೆ.
ADVERTISEMENT
ಧೋನಿ ಜನ್ಮದಿನದ ಪ್ರಯುಕ್ತ ಹೈದರಾಬಾದ್ನ ಆರ್ಟಿಸಿ ಕ್ರಾಸ್ ರೋಡ್ನಲ್ಲಿ 52 ಅಡಿ ಎತ್ತರ ಬೃಹತ್ ಕಟೌಟ್ ಅನ್ನು ಅಭಿಮಾನಿಗಳು ಅಳವಡಿಸಿದ್ದಾರೆ. ಟೀಂ ಇಂಡಿಯಾ ಜೆರ್ಸಿ ಧರಿಸಿ, ಬ್ಯಾಟ್ ಹಿಡಿದಿರುವ ಧೋನಿ ಕಟೌಟ್ ಮಿರಮಿರ ಮಿಂಚುತ್ತಿದೆ.
ಇದಕ್ಕಿಂತಲೂ ದೊಡ್ಡದಾದ ಕಟೌಟ್ ಅನ್ನು ಆಂಧ್ರಪ್ರದೇಶದ ನಂದಿಗಾಮದಲ್ಲಿ ಅಭಿಮಾನಿಗಳು ಅಳವಡಿಸಿದ್ದಾರೆ. ಇದರ ಎತ್ತರ ಬರೋಬ್ಬರಿ 77 ಅಡಿ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ
ADVERTISEMENT