ದಕ್ಷಿಣ ಕನ್ನಡದ ಜೈನ ಮೈತ್ರಿ ಕೂಟ ನೀಡುವ ಪ್ರತಿಷ್ಠಿತ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿಗೆ ವಿದ್ವಾಂಸ ಮೂಡಬಿದ್ರೆಯ “ಮುನಿರಾಜ ರೆಂಜಾಳ” ಪಾತ್ರರಾಗಿದ್ದಾರೆ.
ಏ.15 ರ.ದು ಸಂಜೆ 4 ಗಂಟೆಗೆ ಬಸವನಗುಡಿಯ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕಲ್ಯಾಣ ಮಂಟಪದಲ್ಲಿ ಜೈನ ಮೈತ್ರಿ ಕೂಟದ ವಾರ್ಷಿಕೋತ್ಸವದ ವೇಳೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಪ್ರಶಸ್ತಿಯು 25 ಸಾವಿರ ರೂ.ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಏ.15 ರಂದು ನಡೆಯುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ನರಸಿಂಹರಾಜಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಗಳು ವಹಿಸಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರು’ ಪುಸ್ತಕವನ್ನು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರು ಬಿಡುಗಡೆ ಮಾಡಲಿದ್ದಾರೆ.