ಸಚಿವ ಮುನಿರತ್ನ (Minister Muniratna) ಅವರು ಐಎಎಸ್ ಅಧಿಕಾರಿಯನ್ನು ಬ್ಲ್ಯಾಕ್ಮೇಲ್ ಮಾಡಿ ಅಥವಾ ಪ್ರಭಾವ ಬಳಸಿಕೊಂಡು ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗಂಭಿರ ಆರೋಪ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಐಎಎಸ್ ಅಧಿಕಾರಿ ತುಳಸಿ ಮುದ್ದಿನೇನಿಯವರ ಪತಿ ಹನಿಟ್ರ್ಯಾಪ್ನಲ್ಲಿ ಸಿಲುಕಿದ್ದರು. ಇದನ್ನೇ ಅಸ್ತ್ರವನ್ನಾಗಿ
ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ.ಸಚಿವ ಮುನಿರತ್ನ (Muniratna) ಐಎಎಸ್ ಅಧಿಕಾರಿ ತುಳಸಿ ಮುದ್ದಿನೇನಿ ಯವರನ್ನು ಬ್ಲ್ಯಾಕ್ ಮೇಲ್ ಅಥವಾ ಪ್ರಭಾವ ಬಳಿಸಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಆಡಿಯೋ, ವಿಡಿಯೋ ಎರಡೂ ಇದೆ.
ಹನಿಟ್ರ್ಯಾಪ್ ಮಾಡಿದ ಯುವತಿಯ ಪೋಟೋ ಮುನಿರತ್ನ ಜೊತೆ ಇರುವುದು ಸಿಕ್ಕಿದೆ. ಈ ಸಂಬಂಧ ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಮತ್ತಷ್ಟು ಮಾಹಿತಿ ಬಹಿರಂಗ ಪಡಿಸಲಾಗುವುದು
ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಣ್ಮಣ ಅವರು ಸಚಿವ ಮುನಿರತ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಸಚಿವ ಮುನಿರತ್ನಗೆ ಬಿಗ್ ಶಾಕ್ – ಹಳೇ ಕೇಸ್ ರೀಓಪನ್
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣರ ಸರ್ಕಾರದ ಮೇಲಿನ ಆರೋಪ ವಿಚಾರವಾಗಿ ಮಾತನಾಡಿದ ಲಕ್ಷ್ಮಣ ಅವರು, ಸಿದ್ದರಾಮಯ್ಯ, ಕೆಂಪಣ್ಣರ ಭೇಟಿ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯಿಂದ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವಾಗುತ್ತಿದೆ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿಯವರೇ ಪೂರಕ ದಾಖಲೆ ಕೊಡಿ ಎಂದು ಕೇಳುವ ಮೂಲಕ ಈ ಕೆಲಸ ನಡೆಯುತ್ತಿದೆ.
ಮುನಿರತ್ನ ವಿರುದ್ದ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾನು ಈ ಸಂಬಂಧ ದಾಖಲೆ ಬಿಡುಗಡೆ ಮಾಡುತ್ತೇನೆ. ಲಂಚ ಪಡೆಯುವುದಕ್ಕೆ ದಾಖಲೆ ಎಲ್ಲಿ ಇರುತ್ತದೆ ?. ಎಲ್ಲಾ ಯಡಿಯೂರಪ್ಪ ರೀತಿ ಲಂಚ ಪಡೆಯುತ್ತಾರಾ.? ಮುನಿರತ್ನಂ ಎಲ್ಲವನ್ನೂ ಒಬ್ಬ ಕೋಲಾರದ ಅಧಿಕಾರಿಗೆ ವಹಿಸಿದ್ದಾರೆ. ಆ ಅಧಿಕಾರಿ ಗುತ್ತಿಗೆದಾರರಿಂದ 10% ಪಡೆಯಬೇಕೆಂದು ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : ಕನ್ನಡ ಮರೆತು ಸಚಿವ ಮುನಿರತ್ನ ಹಿಂದಿ ಗುಲಾಮಗಿರಿ : ಫ್ಲೆಕ್ಸ್ಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರು
ಬೆಳಗ್ಗೆ ಮುನಿರತ್ನ ಗುತ್ತಿಗೆದಾರರ ಜೊತೆ ವಾಟ್ಸ್ಅಫ್ ಕಾಲ್ನಲ್ಲಿ ಮಾತನಾಡಿದ್ದು, ಈ ಆರೋಪ ಬಿಟ್ಟುಬಿಡಿ ಎಂದು ಗೋಗರೆದಿದ್ದಾರೆ. ಈ ಬಗ್ಗೆ ಕರೆ ಮಾಡಿದ ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ
ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.