ಚಿತ್ರದುರ್ಗ ಜಿಲ್ಲೆಯಲ್ಲಿರುವ ಪ್ರಸಿದ್ಧ ಮುರುಘಾ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈಗ ಕೈದಿ ಸಂಖ್ಯೆ 2261.
ನಿನ್ನೆ ರಾತ್ರಿ ಸ್ವಾಮೀಜಿಯವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ನ್ಯಾಯಾಧೀಶರು ಸ್ವಾಮೀಜಿಯವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಇದಕ್ಕೂ ಮೊದಲು ಸ್ವಾಮೀಜಿಯವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಚಿತ್ರದುರ್ಗ ಜಿಲ್ಲಾ ಕಾರ್ಯಗ್ರಹಕ್ಕೆ ಪ್ರವೇಶಿಸುವ ವೇಳೆ ಸ್ವಾಮೀಜಿಯವರು ಕಾವಿ ಧಿರಿಸಿನ ಜೊತೆಗೆ ಬಿಳಿ ಬಣ್ಣದ ಬಟ್ಟೆಯನ್ನು ಹೊದ್ದುಕೊಂಡಿದ್ದರು.
ಇವತ್ತು ಚಿತ್ರದುರ್ಗ ಪೊಲೀಸ್ರು ಸ್ವಾಮೀಜಿಯವರ ಕಸ್ಟಡಿಯನ್ನು ಕೇಳುವ ಸಾಧ್ಯತೆ ಇದೆ.
ಪೋಕ್ಸೋ ಪ್ರಕರಣದಡಿ ಬಂಧನ ಆಗಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಹೇಳಿಕೆ, ಕೃತ್ಯ ನಡೆದಿರುವ ಸ್ಥಳದಲ್ಲಿ ಸ್ಥಳ ಮಹಜರು ಪ್ರಕ್ರಿಯೆಗಳು ಬಾಕಿ ಇವೆ.
ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ತಮ್ಮ ಕಷ್ಟಡಿಗೆ ನೀಡುವಂತೆ ತನಿಖಾಧಿಕಾರಿ ಇವತ್ತು ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಲಿದ್ದಾರೆ.
ಇತ್ತ ಸ್ವಾಮೀಜಿ ಅವರ ಬಂಧನ ಆಗಿರುವ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ಸಹಜವಾಗಿಯೇ ವಜಾಗೊಂಡಿದೆ. ಈ ಹಿನ್ನಲೆಯಲ್ಲಿ ಸ್ವಾಮೀಜಿ ಅವರ ಪರ ವಕೀಲರು ಇವತ್ತು ರೆಗ್ಯುಲರ್ ಬೇಲಿಗಾಗಿ ಪ್ರತ್ಯೇಕವಾಗಿ ಕೋರ್ಟಿಗೆ ಸಲ್ಲಿಸುವ ಸಾಧ್ಯತೆ ಇದೆ.
ಪ್ರಕರಣದ ಎರಡನೇ ಆರೋಪಿ ರಶ್ಮಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಾರ್ಡನ್ ಆಗಿರುವ ಈಕೆಯನ್ನು ಪೊಲೀಸರು ಬಂದಿಸುವ ಸಾಧ್ಯತೆ ಇದೆ.