ಮುರುಘಾ ಮಠದ ಸ್ವಾಮೀಜಿ (Murugha Math Shree) ವಿರುದ್ಧ ದಾಖಲಾದ ಫೋಕ್ಸೋ (Pocso) ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿಕೆ ಮಾಡಿದೆ..
ಶಿವಮೂರ್ತಿ ಮುರುಘಾ ಸ್ವಾಮೀಜಿಗಳ (Murugha Math Shree) ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ನಾಳೆಗೆ ಅವಕಾಶ ಮಾಡಿಕೊಡಲಾಗಿದೆ. ಸಂತ್ರಸ್ತೆಯರ ಪರ ವಕೀಲರಿಗೆ ಸಂತ್ರಸ್ತೆಯರ ಭೇಟಿಗೆ ಅವಕಾಶ ನೀಡಿ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ : ಮುರುಘಾ ಮಠದ ಇತಿಹಾಸ ಮತ್ತು ಪರಂಪರೆ!
ಸಂತ್ರಸ್ತೆಯರ ಭೇಟಿಯಾಗಿ ಮಾಹಿತಿ ಪಡೆದು ಮಂಗಳವಾರ ಶ್ರೀಗಳ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಸಂತ್ರಸ್ತೆಯರ ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : BIG BREAKING: ಮುರುಘಾ ಸ್ವಾಮೀಜಿ ಬಂಧನ