ಅಂತರಾಷ್ಟ್ರೀಯ ಮಟ್ಟದ ಟಿ-20 ಕ್ರಿಕೆಟ್ಗೆ ಬಾಂಗ್ಲಾದೇಶದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ (Mushfiqur Rahim) ನಿವೃತ್ತಿ ಘೋಷಣೆ ಮಾಡಿದ್ದಾರೆ. ಏಕದಿನ ಪಂದ್ಯ ಮತ್ತು ಟೆಸ್ಟ್ಗಳಲ್ಲಿ ತಮ್ಮ ಆಟ ಮುಂದುವರೆಸಲಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ನಲ್ಲಿ ಮುಶ್ಫಿಕರ್ ರಹೀಮ್ (Mushfiqur Rahim) ಎರಡೂ ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ, ಶೇಕ್ ಅಲ್ ಹಸನ್ ನಾಯಕತ್ವದ ತಂಡ ಸೂಪರ್ 4 ಹಂತಕ್ಕೆ ತಲುಪುವಲ್ಲಿ ಸೋತಿದೆ. ಆಡಿದ 2 ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ವಿರುದ್ಧ ಸೋಲು ಅನುಭವಿಸಿದೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆಹೊರಡಿಸಿರುವ ಮುಶ್ಫಿಕರ್ ರಹೀಮ್, ಏಕದಿನ ಪಂದ್ಯ ಮತ್ತು ಟೆಸ್ಟ್ ಪಂದ್ಯಗಳ ಕಡೆ ನನ್ನ ಗಮನ ಹರಿಸಲು ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ. ಆದಾಗ್ಯೂ, ಅವಕಾಶ ಒದಗಿ ಬಂದ್ರೆ ಪ್ರಾಂಚೈಸಿ ಲೀಗ್ಗಳಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.
I would like to announce my retirement from T20 INTERNATIONALS and focus on Test and ODI formats of the game. I will be available to play franchise leagues when the opportunity arrives. Looking forward to proudly represent my nation in the two formats-MR15
— Mushfiqur Rahim (@mushfiqur15) September 4, 2022
ಬಾಂಗ್ಲಾದೇಶದ ಕ್ರಿಕೆಟ್ ತಂಡದ ತಮೀಮ್ ಇಕ್ಭಾಲ್ ಜುಲೈನಲ್ಲಿ ಟಿ-20 ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ, ಮುಶ್ಫಿಕರ್ ರಹೀಮ್ ಎರಡನೆಯವರಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇವರು ಅಫ್ಘಾನಿಸ್ತಾನದ ವಿರುದ್ಧ ಕೇವಲ 1 ರಂದು ಹಾಗೂ ಶ್ರೀಲಂಕಾ ವಿರುದ್ಧ ಕೇಔಲ 4 ರಂದು ಗಳಿಸಿದ್ದಾರೆ.
ರಹೀಮ್ ಬಾಂಗ್ಲಾದೇಶದ ಕ್ರಿಕೆಟ್ ತಂಡವನ್ನು 102 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ 1,500 ರನ್ ಗಳಿಸಿದ್ದಾರೆ. ಒವರ ಬ್ಯಾಟಿಂಗ್ ಸರಾಸರಿ 19.48 ಆಗಿದೆ.
ಟಿ-20 ಕ್ರಿಕೆಟ್ನಲ್ಲಿ ರಹೀಮ್ ವಿಕೆಟ್ ಪತನವಿಲ್ಲದೇ 72 ರನ್ ಗಳಿಸಿರುವುದು ಶ್ರೇಷ್ಟವಾಗಿದೆ. ಟಿ-2ಒ ಕ್ರಿಕೆಟ್ನಲ್ಲಿ ಇವರ ಸ್ಟ್ರೈಕ್ ರೇಟ್ 115.03 ಇದೆ.