ಮಣಿಪುರದಲ್ಲಿ ಎಸ್ಟಿ ಮೀಸಲಾತಿ ಸಂಘರ್ಷ ತೀವ್ರಗೊಂಡಿದ್ದು, ಭಾರೀ ಹಿಂಸಾಚಾರವೇ ಸಂಭವಿಸಿದೆ. ಮಣಿಪುರದ ಬಹುತೇಕ ಕಡೆ ನಡುಬೀದಿಯಲ್ಲಿ ಕಾಳಗ ನಡೆಯುತ್ತಿದ್ದು, ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ.ಹಿಂಸಾಚಾರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇಂಫಾಲ ಸೇರಿ 10 ಜಿಲ್ಲೆಗಳಲ್ಲಿ ಪೊಲೀಸರು ಕರ್ಫ್ಯೂ ವಿಧಿಸಿದ್ದು, ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಿದೆ.
ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಡೆಯುವಂತೆ ಒಲಂಪಿಕ್ ತಾರೆ ಮೇರಿ ಕೋಮ್ ಮೊರೆಯಿಟ್ಟಿದ್ದಾರೆ. ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ.. ದಯವಿಟ್ಟು ನಮ್ಮ ರಾಜ್ಯ ನೆರವಿಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಸಚಿವಾಲಯ,ಅಮಿತ್ ಶಾ, ರಾಜನಾಥ್ ಸಿಂಗ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
https://twitter.com/MangteC/status/1653871522011045888/photo/1
ಇದೇ ವೇಳೆ, ಮಣಿಪುರ ಹೊತ್ತಿ ಉರಿಯುತ್ತಿದ್ದರೂ, ಇದೇನು ಸುದ್ದಿಯೇ ಅಲ್ಲ ಎನ್ನುವಂತೆ ವರ್ತನೆ ಮಾಡುತ್ತಿರುವ ರಿಪಬ್ಲಿಕ್ ಟಿವಿ, ಎನ್ಡಿ ಟಿವಿ, ಇಂಡಿಯಾ ಟುಡೇ ವಾಹಿನಿಗಳಿಗೂ ಮೇರಿಕೋಮ್ ಟ್ವೀಟ್ ಟ್ಯಾಗ್ ಮಾಡಿದ್ದಾರೆ.
ಬಹುಸಂಖ್ಯಾತ ಮೀತೇಯ್ ಸಮುದಾಯ ದಶಕಗಳಿಂದ ಎಸ್ಟಿ ಮೀಸಲಾತಿ ಕೋರಿ ಹೋರಾಟ ನಡೆಸುತ್ತಿದೆ. ಸದ್ಯ ಮೀತೇಯ್ ಸಮುದಾಯ ಓಬಿಸಿ ಪಟ್ಟಿಯಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಕೇಂದ್ರದ ಬಹುತೇಕ ನಾಯಕರು ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಸಂಪೂರ್ಣವಾಗಿ ಬ್ಯುಸಿ ಆಗಿದ್ದಾರೆ.