ಶಿಕ್ಷಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ನಗರಸಭೆ ಬಿಜೆಪಿ ಸದಸ್ಯೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಗಾಯಿತ್ರಿ ಮುರುಗೇಶ್ ಬಂಧಿತ ನಗರಸಭೆ ಸದಸ್ಯೆ. ಪತಿ ಮುರುಗೇಶ್ ಜೊತೆ ಶಿಕ್ಷಕಿ ಸುಲೋಚನ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇರೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ.
ಶಿಕ್ಷಕಿ ಸುಲೋಚನ ಕಳೆದ 6 ತಿಂಗಳ ಹಿಂದೆ ಕೊಲೆಯಾಗಿದ್ದರು. ನಂಜನಗೂಡು ಮಹದೇಶ್ವರ ಬಡಾವಣೆಯಲ್ಲಿ ಮಾರ್ಚ್ 9ರಂದು ಕೊಲೆ ಮಾಡಲಾಗಿತ್ತು.
ಸುಲೋಚನ ನಂಜನಗೂಡು ಮಹದೇವನಗರದ ಮುರಾರ್ಜಿ ವಸತಿ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದರು. ಈಕೆಯ ಪತಿ ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ಒಬ್ಬಂಟಿಯಾಗಿದ್ದ ಸುಲೋಚನ ಜೊತೆ ನಗರಸಭೆ ಸದಸ್ಯೆ ಗಾಯಿತ್ರಿ ಪತಿ ಮುರುಗೇಶ್ ಸಲುಗೆಯಿಂದ ಇದ್ದರು. ಇದೇ ವಿಚಾರಕ್ಕೆ ಸುಪಾರಿ ಕೊಟ್ಟು ನಗರಸಭೆ ಬಿಜೆಪಿ ಸದಸ್ಯೆ ಗಾಯಿತ್ರಿ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ.