ವಿಶ್ವ ವಿಖ್ಯಾತ ಮೈಸೂರು ದಸರಾಗೆ (Mysuru Dasara) ಇಂದು ಮಂಗಳವಾರ ಅರಮನೆಯಲ್ಲಿ ಸಾಂಪ್ರದಾಯಿಕ ದಸರಾಗೆ ಚಾಲನೆ ನೀಡಲಾಗಿದೆ.
ಅರಮನೆಯಲ್ಲಿನ ರತ್ನ ಖಚಿತವಾದ ಸಿಂಹಾಸನ ಜೋಡಣೆ ಮಾಡುವ ಮೂಲಕ ಸಾಂಪ್ರದಾಯಿಕ ದಸರಾಗೆ (Mysuru Dasara) ರಾಜ ಮಾತೆ ಪ್ರಮೋದಾ ದೇವಿ ಚಾಲನೆ ನೀಡಲಿದ್ದಾರೆ.
ಅರಮನೆ ಖಾಸಗಿ ದರ್ಬಾರ್ ಹಾಲ್ ಸಿಂಹಾಸನ ಜೋಡಣಾ ಕಾರ್ಯ ನಡೆಯಲಿದೆ. ಈ ಜೋಡಣಾ ಕಾರ್ಯಕ್ಕೂ ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅರಮನೆ ಪುರೋಹಿತರಿಂದ ವಿವಿಧ ಪೂಜಾ ವಿಧಿ ವಿಧಾನ ನಡೆಯಲಿದೆ.
ಇದನ್ನೂ ಓದಿ : ಮೈಸೂರು ದಸರಾಕ್ಕೆ ಆನೆಗಳ ಪಟ್ಟಿ ಅಂತಿಮ – ಈ 14 ಆನೆಗಳ ವಯಸ್ಸು ಎಷ್ಟು ಗೊತ್ತಾ..? – ಇಲ್ಲಿದೆ ಮಾಹಿತಿ
ಸಿಂಹಾಸನ ಜೋಡಣಾ ಕಾರ್ಯಕ್ರಮದ ಸಮಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗುತ್ತದೆ. ಮಧ್ಯಾಹ್ನದ ನಂತರ ಪ್ರವೇಶಿಕರಿಗೆ ಅರಮನೆಗೆ ಮರಳಿ ಪ್ರವೇಶ ಸಿಗಲಿದೆ.
ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಾರ್ಗದರ್ಶನ ಮಾಡಲಿದ್ದಾರೆ. ಇಂದಿನಿಂದ ಅರಮನೆಯಲ್ಲಿ ಪ್ರತಿನಿತ್ಯ ದಸರಾ ಸಂಬಂಧಿತ ಕಾರ್ಯಕ್ರಮಗಳು ನಡೆಯಲಿವೆ. ಇದನ್ನೂ ಓದಿ : ಮೈಸೂರು ದಸರಾ: ಮರಳಿನ ಮೂಟೆ, ಭರ್ಜರಿ ಆಹಾರ – ಜಂಬೂ ಸವಾರಿಗೆ ಆನೆಗಳ ತಯಾರಿ ಹೇಗಿರುತ್ತೆ..?