ನಾಡಹಬ್ಬ ಮೈಸೂರು ದಸರಾ (Mysuru Dasra) (Mysuru Dasara) ಉದ್ಘಾಟನಾ ಕಾರ್ಯಕ್ರಮದಲ್ಲೇ ಕನ್ನಡವೇ ಕಡೆಗಣನೆ ಆಗಿದೆ.
ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu), ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದ ಒಂದೇ ಒಂದು ಅಕ್ಷರವೂ ವೇದಿಕೆಯಲ್ಲಿ ಕಾಣಿಸಲಿಲ್ಲ.
ಅತಿಥಿಗಳ ಆಸನದ ಹಿಂಭಾಗದಲ್ಲಿ ಹಾಕಲಾಗಿದ್ದ ಪರದೆಯಲ್ಲಿ ಆರಂಭದಲ್ಲಿ ಇಂಗ್ಲೀಷ್ ಬಿಟ್ಟರೆ ಮಾತೃಭಾಷೆಯ ಕನ್ನಡದ ಅಕ್ಷರವೇ ಕಾಣಿಸಲಿಲ್ಲ. ರಾಷ್ಟ್ರಪತಿಗಳು ದಸರಾ ಉದ್ಘಾಟಿಸಿದ ಬಳಿಕವಷ್ಟೇ ಕನ್ನಡದಲ್ಲಿ ಎಲ್ಇಡಿ ಪರದೆ ಕಾಣಿಸಿಕೊಳ್ತು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡವೇ ಮೊದಲ ಆದ್ಯತೆ ಆಗಬೇಕೆಂದು ಹೇಳಿ ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿತ ಶರ್ಮಾ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದ್ದರು.
ಆದರೆ ಕನ್ನಡ ಕಡ್ಡಾಯ ಬಳಕೆಯ ಆದೇಶ ಆದೇಶಕ್ಕಷ್ಟೇ ಸೀಮಿತವಾಗಿದೆ.
ADVERTISEMENT
ADVERTISEMENT