ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಂವಹನ ಹಾಗೂ ಪತ್ರಿಕೋದ್ಯಮ ಅಧ್ಯಯನ ವಿಭಾಗದಲ್ಲಿ ವಾಮಾಚಾರ ನಡೆದಿದ್ದು, ಈ ಸಂಬಂಧ ವಿಭಾಗದ ಮುಖ್ಯಸ್ಥರು ಕುಲಸಚಿವರಿಗೆ ದೂರು ನೀಡಿದ್ದಾರೆ.
ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ತೇಜಸ್ವಿ ನವಿಲೂರು ಅವರ ಮೇಲೆ ವಿಭಾಗದ ಕಚೇರಿಯಲ್ಲಿಯೇ ವಾಮಾಚಾರ ಮಾಡಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಬೇಕು ಎಂದು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಹೇಮಲತಾ ಕುಲಸಚಿವರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ : Rain Effect – ಪ್ರಯಾಣಿಕರೇ ಗಮನಿಸಿ – ಬೆಂಗಳೂರು: ಮೈಸೂರು ನಡುವೆ ಸಂಚಾರ ಬೇಡ
ನಡೆದದ್ದೇನು.?
ಸೋಮವಾರ ಕೆಲಸಕ್ಕೆ ಹಾಜರಾದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ತೇಜಸ್ವಿ ನವಿಲೂರು ಕೊಠಡಿಯ ಬಾಗಿಲು ತೆರೆದು ತಮ್ಮ ಟೇಬಲ್ನ ಡ್ರಾಯರ್ ಎಳೆದಿದ್ದಾರೆ. ಆಗ ಅವರ ಕತ್ತರಿಸಿರುವುದು ಫೋಟೋ, ಕೋಳಿ ತಲೆ, ಕಾಲು, ಕುಂಕುಮ, ಕೂದಲು, ಬಳೆ ಚೂರು ಕಂಡು ಬಂದಿವೆ.
ತಕ್ಷಣವೇ ತೇಜಸ್ವಿ ಅವರು ಕುಲಪತಿ ವಿಶೇಷಾಧಿಕಾರಿ ಗಮನಕ್ಕೆ ತಂದಿದ್ದಾರೆ. ನಂತರ ವಿಭಾಗದ ಮುಖ್ಯಸ್ಥೆ ಹೇಮಲತಾ ಕುಲಸಚಿವರಿಗೆ ದೂರು ನೀಡಿದ್ದಾರೆ.
ಹಿನ್ನೆಲೆ ಏನು..?
ತೇಜಸ್ವಿ ನವಿಲೂರು ಅವರು ಸಿದ್ಧಪಾಠ ತಯಾರಿ ವಿಳಂಬ ಮಾಡಿದ್ದರು ಎಂದು ವಿಶ್ವವಿದ್ಯಾಲಯ ಅಮಾನತು ಮಾಡಿತ್ತು. ಸಂಶೋಧನ ವಿದ್ಯಾರ್ಥಿಗಳ ಮನವಿ ಮೇರೆಗೆ ಅಮಾನತು ಆದೇಶ ಹಿಂಪಡೆಯಲಾಗಿತ್ತು. ಇಂದು ಅವರು ಕರ್ತವ್ಯಕ್ಕೆ ಹಾಜರಾಗುವ ದಿನವೇ ಈ ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ವಿಭಾಗದ ಸಿಬ್ಬಂದಿಯೇ ವಾಮಾಚಾರ ಮಾಡಿಸಿದ್ರಾ..?
ತೇಜಸ್ವಿ ನವಿಲೂರು ಅವರ ಮೇಲೆ ವಿಭಾಗದ ಸಿಬ್ಬಂದಿಯೇ ವಾಮಾಚಾರ ಮಾಡಿಸಿದ್ರಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ವಿಭಾಗದ ಎಲ್ಲಾ ಬಾಗಿಲುಗಳನ್ನೂ ಲಾಕ್ ಮಾಡಿದ್ದಾಗ್ಯೂ, ಅವರ ಕಚೇರಿಯ ಬಾಗಿಲನ್ನು ತೆಗೆದು, ಅವರ ಟೇಬಲ್ನ ಟ್ರಾಯರ್ನಲ್ಲಿ ವಾಮಾಚಾರದ ವಸ್ತುಗಳನ್ನು ಇಡಲಾಗಿದೆ. ಮತ್ತು ಮರುದಿನ ಎಂದಿನಂತೆಯೇ ಕಚೇರಿಯ ಬಾಗಿಲುಗಳು ಲಾಕ್ ಆಗಿದ್ದವು. ಇದು ಅನುಮಾನಕ್ಕೆ ಎಡೆ ಮಾಡಿದೆ.
ಕಾನೂನು ಕ್ರಮ :
ಹೇಮಲತಾ ಅವರು ನೀಡಿರುವ ವಾಮಾಚಾರದ ದುರನ್ನು ಆಧರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ : ಮೈಸೂರು ದಸರಾ: ಮರಳಿನ ಮೂಟೆ, ಭರ್ಜರಿ ಆಹಾರ – ಜಂಬೂ ಸವಾರಿಗೆ ಆನೆಗಳ ತಯಾರಿ ಹೇಗಿರುತ್ತೆ..?